Kannada NewsKarnataka NewsNational

ಇಂದಿನಿಂದ ಅಮುಲ್ ಹಾಲಿನ ಬೆಲೆ 2 ರೂ.‌ ಹೆಚ್ಚಳ

ಪ್ರಗತಿವಾಹಿನಿ ಸುದ್ದಿ: ದೇಶದ ಗಮನ ಲೋಕಸಭೆ ಚುನಾವಣೆ ಫಲಿತಾಂಶದತ್ತ ನೆಟ್ಟಿದೆ. ಈ ಮಧ್ಯೆ ಅಮುಲ್​ ಕಂಪನಿ ಇಂದಿನಿಂದಲೇ (ಜೂ. 03 ಸೋಮವಾರ) ಜಾರಿಗೆ ಬರುವಂತೆ ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್​ಗೆ 2 ರೂ.ಗಳಷ್ಟು ಹೆಚ್ಚಿಸಿದೆ.

ಈ ಕುರಿತು ಗುಜರಾತ್​​ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್​ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ಅಮುಲ್ ಗೋಲ್ಡ್, ಅಮುಲ್ ಶಕ್ತಿ, ಅಮುಲ್ ಟೀ ಸ್ಪೆಷಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಳದ ದೃಷ್ಟಿಯಿಂದ ಸೋಮವಾರದಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಲಾಗಿದೆ. ಇದರೊಂದಿಗೆ ದೇಶದ ಎಲ್ಲ ಮಾರುಕಟ್ಟೆಗಳಲ್ಲಿ ಅಮುಲ್ ಪ್ಯಾಕೆಟ್‌ ಹಾಲಿನ ಬೆಲೆ ಲೀಟರ್‌ಗೆ 2 ರೂ. ಏರಿಕೆಯಾಗಲಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ತಿಳಿಸಿದೆ.

ಈ ಬೆಲೆ ಏರಿಕೆ ಅಮುಲ್​ ಗೋಲ್ಡ್​, ಅಮುಲ್​ ತಾಜಾ ಮತ್ತು ಅಮುಲ್​ ಶಕ್ತಿ ಅಂಗ ಉತ್ಪನ್ನಗಳಿಗೂ ಅನ್ವಯವಾಗಲಿದೆ. ಆದರೆ ಈ ಬೆಲೆ ಏರಿಕೆ ಅಮುಲ್​ ತಾಜಾದ ಸಣ್ಣ ಪಾಕೇಟ್​​ನ ಅನ್ವಯವಾಗುವುದಿಲ್ಲವೆಂದು ಜಿಸಿಎಂಎಂಎಫ್​​ ಹೇಳಿದೆ. ಪ್ರತಿ ಲೀಟರ್​ಗೆ 2 ರೂ. ಹೆಚ್ಚಳದೊಂದಿಗೆ ದರ ಶೇ 3-4ರಷ್ಟು ಅಧಿಕವಾಗಲಿದೆ.

ಈ ಬಗ್ಗೆ ಅಮುಲ್​ ಬ್ರ್ಯಾಂಡ್​ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಜಿಸಿಎಂಎಂಎಫ್​ನ ಎಂಡಿ ಜಯೇನ್​ ಮೆಹ್ತಾ ಮಾತನಾಡಿ, ಹೆಚ್ಚಿದ ಉತ್ಪಾದಾನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button