ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಚೆನ್ನಮ್ಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಯತ್ನ ಸಂಘಟನೆಯ ವತಿಯಿಂದ ವಿದ್ಯಾರ್ಥಿನಿಯರ ವಯೋ ಸಹಜ ಸಮಸ್ಯೆಗಳ ಕುರಿತು ತಿಳುವಳಿಕೆ ನೀಡುವ ಕಾರ್ಯಕ್ರಮ ನಡೆಯಿತು.
ಈ ಶಾಲೆಯಲ್ಲಿ 5 ರಿಂದ 8ನೆ ತರಗತಿ ಓದುತ್ತಿರುವ 30 ವಿದ್ಯಾರ್ಥಿನಿಯರಿಗೆ ಅವಶ್ಯಕ ವಸ್ತುಗಳನ್ನು ವಿತರಿಸಲಾಯಿತು. ಡಾ. ಅನಿತಾ ಉಮದಿ, ಹೆಣ್ಣು ಮಕ್ಕಳ ಮುಟ್ಟಿನ ಸಮಯದ ಸಮಸ್ಯೆ ಹಾಗೂ ನೈರ್ಮಲ್ಯ ಕುರಿತು ವಿವರಿಸಿ, ಪರಿಹಾರವನ್ನು ತಿಳಿಸಿದರು.
ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ, ಸಂಘಟನೆ ನಡೆದು ಬಂದ ದಾರಿ ವಿವರಿಸಿದರು. ಸಂಘಟನೆ ಕಾರ್ಯಕರ್ತರು ಮಕ್ಕಳಿಗೆ ಹಣ್ಣು ಮತ್ತು ಜ್ಯೂಸ್ ಪ್ಯಾಕೆಟ್‌ಗಳನ್ನು ವಿತರಿಸಿದರು.
ಮಂಗಳಾ, ಬೀನಾ, ಶ್ವೇತಾ, ಪದ್ಮಾ, ಗೌರಿ, ಸುನೀತಾ, ಶುಭಾ, ಸಂಗೀತಾ, ಶೀಲಾ ದೇಶಪಾಂಡೆ ಹಾಗೂ ಶಿಕ್ಷಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಬಿ.ಎಫ್.ನದಾಫ್ ಸ್ವಾಗತಿಸಿದರು. ಶಿಕ್ಷಕಿ ಶುಭಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ