ಪ್ರಗತಿವಾಹಿನಿ ಸುದ್ದಿ, ಅಥಣಿ – 3 ಸಾವಿರ ರೂ. ಲಂಚ ಪಡೆಯುವಾಗ ಎಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಅನಂತಪುರದ ಅಂಬರೀಶ್ ದುಗ್ಗಾಣಿ ಎನ್ನುವವರ ಕೃಷಿ ಹೊಂಡದ ನರೇಗಾ ಯೋಜನೆ ಬಿಲ್ ಕ್ಲಿಯರ್ ಮಾಡುವುದಕ್ಕಾಗಿ 6 ಸಾವಿರ ರೂ. ಲಂಚ ಕೇಳಿದ್ದ ತಾಲೂಕು ಪಂಚಾಯಿತಿ ಎಂಜಿನಿಯರ್ ನಾಗಪ್ಪ ಭೀಮಪ್ಪ ಮೊಕಾಶಿ 3000 ರೂ. ಪಡೆಯುವಾಗ ಎಸಿಬಿ ಬಲೆಗೆ ಬಿದ್ದರು.
ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಎಸಿಬಿ ಡಿಎಸ್ಪಿ ಶರಣಪ್ಪ ಮತ್ತು ಇನಸ್ಪೆಕ್ಟರ್ ಗಳಾದ ಎ.ಎಸ್. ಗುಡಿಗೊಪ್ಪ ಮತ್ತು ಸುನೀಲ ಕುಮಾರ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ