Cancer Hospital 2
Laxmi Tai Society2
Beereshwara add32

ರೈಲ್ವೆ ಹಳಿ ಮೇಲೆ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

Anvekar 3

ಪ್ರಗತಿವಾಹಿನಿ ಸುದ್ದಿ ; ಶನಿವಾರ ಬೆಳಗಾವಿಯ ನ್ಯೂ ಗಾಂಧೀನಗರದ ಹತ್ತಿರ ಚಲಿಸುವ ರೈಲಿನ ಮುಂದೆ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಳಗಾವಿ – ಸಾಂಬ್ರಾ ರೈಲು ನಿಲ್ದಾಣಗಳ ಮಧ್ಯೆ ಕೀ.ಮೀ.ನಂ: 73/300-400 ರಲ್ಲಿ ( ಬೆಳಗಾವಿಯ ನ್ಯೂ ಗಾಂಧೀನಗರ ಹತ್ತಿರ ) ಚಲಿಸುವ ರೈಲಿನ ಮುಂದೆ ಬಿದ್ದು ಅತ್ಯಹತ್ಯೆ ಮಾಡಿಕೊಂಡು ಈತ ಮೃತಪಟ್ಟಿದ್ದು ಈ ಬಗ್ಗೆ ದಿನಾಂಕ: 10-02-2024 ರಂದು ಬೆಳಗಾವಿ ರೈಲ್ವೆ ಪೋಲೀಸ್ ಠಾಣೆಯಲ್ಲಿ (ಯು.ಡಿ.ಆರ್ ನಂ-07/2024 ಕಲಂ: 174 ಸಿ.ಆರ್.ಪಿ.ಸಿ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೃತನ ಚಹರೆ ಪಟ್ಟಿಯ ವಿವರ:

ಅಪರಿಚಿತ ಗಂಡಸು ವಯಸ್ಸು ಅಂದಾಜು: 55-60 ವರ್ಷ, ಎತ್ತರ 5-7″, ಸಾದಾ ಗೆಂಪು ಮೈ ಬಣ್ಣ, ಉದ್ದ ಮುಖ, ದಪ್ಪನೆಯ ಮೂಗು, ತಲೆಯಲ್ಲಿ ಸಣ್ಣಗೆ ಕಪ್ಪು- ಬಿಳಿ ಕೂದಲು, ಸಣ್ಣಗೆ ಕಪ್ಪು – ಬಿಳಿ ಮೀಸೆ ದಾಡಿ ಬಿಟ್ಟಿರುತ್ತಾನೆ. ನಡದಲ್ಲಿ ಕಪ್ಪು ಉಡದಾರ, ಬಲಗೈಯಲ್ಲಿ ಬಿಳಿ ದಾರ ಕಟ್ಟಿರುತ್ತಾನೆ.

Emergency Service

ಬಟ್ಟೆ ವಿವರ :-

1) ಒಂದು ತಿಳಿ ನೀಲಿ ಪುಲ್ ಶರ್ಟ, 2] ಬಿಳಿ ಮುಂಡಿ ಚಾಟ ಬನಿಯನ್ 3] ನೀಲಿ ಚಕ್ಸ್ ಹಾಪ್ ಚಡ್ಡಿ

4] ಚಾಕಲೇಟ್ ಕಲರ್ ಅಂಡರವೇರ್ 5] ಒಂದು ಟಾವೆಲ್ ಇರುತ್ತದೆ.

ಮೃತನ ಜೇಬಿನಲ್ಲಿ ಮಾವಿನಕಟ್ಟಿಯಿಂದ ಬೆಳಗಾವಿವರೆಗೆ ಪ್ರಯಾಣ ಮಾಡಿದ ಬಸ್ ಟಿಕೆಟ್ ಇದೆ.

ಈ ಅಪರಿಚಿತ ಗಂಡಸಿನ ವಾರಸುದಾರರು ಯಾರೂ ಪತ್ತೆಯಾಗಿಲ್ಲ. ಈ ಚಹರೆ ಪಟ್ಟಿ ಹೋಲುವ ಗಂಡಸು ಕಾಣೆಯಾದ ಬಗ್ಗೆ ತಮ್ಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ ಅಥವಾ ಮೃತನ ರಕ್ತ ಸಂಬಂಧಿಗಳು ಯಾರಾದರೂ ಪತ್ತೆಯಾದರೆ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (0831) 2405273 ಪಿ.ಎಸ್.ಐ ಮೊಬೈಲ್ ನಂ:9480802127 ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ- (080) 22871291 ಅನ್ನು ಸಂಪರ್ಕಿಸಲು ಕೋರಿದೆ.

Gokak Jyotishi add 8-2
Bottom Add3
Bottom Ad 2

You cannot copy content of this page