Kannada NewsKarnataka NewsLatest

ಬೈಕ್ ಸವಾರನ ಬಲಿತೆಗೆದುಕೊಂಡ ಅಪರಿಚಿತ ವಾಹನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಕೆಕೆ ಕೊಪ್ಪ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಬೈಕ್ ಸವಾರನನ್ನು ಬಲಿತೆಗೆದುಕೊಂಡಿದೆ.

ಸುಳೇಬಾವಿ ಗ್ರಾಮದ ರಾಮು ನಾರಾಯಣ ಬಂಗೋಡಿ (54) ಮೃತಪಟ್ಟವರು. ಅವರು ವಡಗಾವಿ ದೇವಾಂಗನಗರ ನಿವಾಸಿ, ಗೋಪಾಲ ಬಸಪ್ಪ ತಾಳೂಕರ (58) ಅವರೊಂದಿಗೆ ಬುಧವಾರ ಮಧ್ಯಾಹ್ನ ಹಿರೇಬಾಗೇವಾಡಿಯಿಂದ ಬೈಕ್ ನಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ವಾಹನ ಗುದ್ದಿದೆ.

ಗೋಪಾಲ ತಾಳೂಕರ ಅವರಿಗೆ ಗಾಯಗಳಾಗಿದ್ದು ತಲೆ ಹಾಗೂ ಮುಖಕ್ಕೆ ತೀವ್ರ ಏಟು ತಗುಲಿದ ರಾಮು ಬಂಗೋಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತಪಡಿಸಿದ ವಾಹನದವನು ನಿಲ್ಲಿಸದೆ ಪರಾರಿಯಾಗಿದ್ದಾನೆ.

ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

https://pragati.taskdun.com/urgent-order-for-installation-of-108-feet-statue-of-basavanna-on-the-bank-of-river-ghataprabha-cm-basavaraja-bommai/
https://pragati.taskdun.com/all-are-equal-in-cooperative-arena-cm-bommai/
https://pragati.taskdun.com/this-young-mans-stomach-had-56-blades/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button