
ಪ್ರಗತಿವಾಹಿನಿ ಸುದ್ದಿ, ಒಟ್ಟಾವಾ: ಸುದ್ದಿಯಾಗಬೇಕು ಎಂದರೆ ಹೀಗೇ ಮಾಡಬೇಕು ಅಥವಾ ಹೀಗೇ ಆಗಬೇಕು ಎಂದೇನಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳು ಸುದ್ದಿಯಾಗಿ ಜಗತ್ತೆಲ್ಲ ಹರಡಬಹುದು.
ಇದಕ್ಕೆ ಸ್ಪಷ್ಟ ನಿದರ್ಶನ ಇಲ್ಲೊಬ್ಬ ಟಿವಿ ಆ್ಯಂಕರ್. ಪಾಕಿಸ್ತಾನದ ಪ್ರವಾಹ ಸಂಬಂಧದ ಸುದ್ದಿ ಓದುವಾಗ ನೊಣ ನುಂಗಿ ತಾವೇ ಸುದ್ದಿಯಾಗಿದ್ದಾರೆ !
ಈ ಘಟನೆ ನಡೆದಿದ್ದು ಕೆನಡಾದಲ್ಲಿ. ಅಲ್ಲಿನ ಟಿವಿ ನಿರೂಪಕಿ ಫರಾಹ್ ನಾಸರ್ ಅವರು ಪಾಕಿಸ್ತಾನದ ಪ್ರವಾಹದ ಬಗ್ಗೆ ಸುದ್ದಿ ನೊಣ ನುಂಗಿದ ಘಟನೆಯ ವೀಡಿಯೊ ಹಂಚಿಕೊಂಡಿದ್ದಾರೆ.
ಗಾಳಿಯಲ್ಲಿ ಹಾರಾಡಿಕೊಂಡು ಬಂದ ನೊಣವೊಂದು ನೇರವಾಗಿ ಅವರ ತೆರೆದ ಬಾಯಿಗೆ ಹೊಕ್ಕಿಈ ಅವಾಂತರವಾಗಿದೆ. “ನಾನು ಇಂದು ಗಾಳಿಯಲ್ಲಿ ನೊಣವನ್ನು ನುಂಗಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಬಾಯಿಗೆ ಬಿದ್ದ ನೊಣ ಸೀದಾ ಅವರ ಹೊಟ್ಟೆಗೆ ಹೋದ ನಂತರ “ಜೀರ್ಣೋಭವ” ಎನ್ನದೆ ಬೇರೆ ಉಪಾಯವಿರಲಿಲ್ಲ. ಆದಾಗ್ಯೂ ಅವರು ತಮ್ಮ ಲೈವ್ ವಾರ್ತೆ ಮುಂದುವರಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ವಿಶ್ವದ ಅತಿ ದೊಡ್ಡ ಆರ್ಥಿಕತೆಯಲ್ಲಿ ಯುಕೆಯನ್ನು ಹಿಂದಿಕ್ಕಿದ ಭಾರತ