Latest

ಕುತೂಹಲ ಮೂಡಿಸಿದ ಆನಂದ್ ಸಿಂಗ್ ನಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್, ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಗೂ ಗೈರಾಗುವ ಮೂಲಕ ತಮ್ಮ ಮುನಿಸು ಮುಂದುವರೆಸಿದ್ದಾರೆ.

ತಮಗೆ ನೀಡಿರುವ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ಬದಲಾವಣೆ ಮಾಡುವಂತೆ ಆನಂದ್ ಸಿಂಗ್ ಪಟ್ಟು ಹಿಡಿದಿದ್ದರೂ ಸಿಎಂ ಬೊಮ್ಮಾಯಿ ಈ ಬಗ್ಗೆ ಯಾವುದೇ ಸ್ಪಂದನೆ ನೀಡುತ್ತಿದ್ದಂತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಗೂ ಆನಂದ್ ಸಿಂಗ್ ಹಾಜರಾಗಿಲ್ಲ.

ಖಾತೆ ಹಂಚಿಕೆ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆ ಇದ್ದಾಗಿದ್ದು, ಇಲಾಖೆಗಳ ಕೆಲಸ ಕಾರ್ಯಗಳ ಆರಂಭದ ದೃಷ್ಟಿಯಿಂದ ಎಲ್ಲಾ ಸಚಿವರು ಸಭೆಗೆ ಹಾಜರಾಗುವುದು ಪ್ರಮುಖವಾಗಿತ್ತು. ಆದರೆ ಆನಂದ್ ಸಿಂಗ್ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರಕ್ಕೆ ಭೇಟಿ ನೀಡಿದ್ದ ಆನಂದ್ ಸಿಂಗ್ ಬೆಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದ್ದರು. ಆದರೆ ಬೆಂಗಳೂರಿಗೆ ಬಾರದೇ ಸ್ವಕ್ಷೇತ್ರಕ್ಕೆ ತೆರಳಿರುವ ಆನಂದ್ ಸಿಂಗ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.

Home add -Advt

ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಅನುಮತಿ

Related Articles

Back to top button