
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಪತಿ ಮಹಾಶಯನೊಬ್ಬ ತನ್ನ ಪತ್ನಿ ಜೊತೆಗಿನ ಖಾಸಗಿ ಫೋಟೋವನ್ನು ವಾಟ್ಸಪ್ ಗ್ರೂಪ್ ಗೆ ಹಾಕಿ, ಕಾಲ್ ಗರ್ಲ್ ಎಂದು ಬಿಂಬಿಸಿರುವ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಬೆಳಕಿಗೆ ಬಂದಿದೆ.
ತಿರುಪತಿಯ ಎಸ್ ಜಿ ಎಸ್ ಕಾಲೇಜಿನ ಜೂನಿಯರ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಕಳೆದ ಆಗಸ್ಟ್ ನಲ್ಲಿ ವಿವಾಹವಾಗಿದ್ದು, ಮದುವೆಯಾದಾಗಿನಿಂದಲೂ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪತಿ ನೀಡುತ್ತಿದ್ದ ದೈಹಿಕ ಹಾಗೂ ಮಾನಸಿಕ ಹಿಂಸೆ ತಾಳಲಾರದೇ ಬೇಸತ್ತ ಪತ್ನಿ ತವರು ಮನೆಗೆ ತೆರಳಿದ್ದಳು.
ಪತ್ನಿ ತನ್ನ ಮಾತಿಗೆ ಬಗ್ಗದಿದ್ದಾಗ ಪತಿ ಮಹಾಶಯ ಪತ್ನಿಯೊಂದಿಗಿನ ಖಾಸಗಿ ಫೋಟೋಗಳನ್ನು ಕಾಲೇಜಿನ ವಾಟ್ಸಪ್ ಗ್ರೂಪ್ ನಲ್ಲಿ ಹರಿಬಿಟ್ಟು, ಪತ್ನಿಯನ್ನು ಕಾಲ್ ಗರ್ಲ್, ಗಂಟೆಗೆ 3000 ರೂ ಎಂದು ಬರೆದಿದ್ದಾನೆ. ಇದನ್ನು ಗಮನಿಸಿದ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ