13 ವರ್ಷದ ಬಾಲಕನಲ್ಲಿ ರೂಪಾಂತರಿಯ ವಿಚಿತ್ರ ರೋಗ
ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಕೊರೊನಾ ಮೂರನೇ ಅಲೆ ಆತಂಕದ ನಡುವೆ ಇದೀಗ ರಾಜ್ಯದಲ್ಲಿ ಮಕ್ಕಳಲ್ಲಿ ಎ-ನೆಕ್ ಎಂಬ ಅಪರೂಪದ ಕಾಯಿಲೆ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಅಕ್ಯುಟ್ ನೆಕ್ರೋಟೈಜಿಂಗ್ ಎನ್ಸೆಫಲೋಪತಿ(ANEC) ಎಂಬ ಅಪರೂಪದ ಕಾಯಿಲೆ ದೇಶದಲ್ಲಿಯೇ ಮೊದಲ ಬಾರಿಗೆ ಮಕ್ಕಳಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇಲ್ಲಿನ ಎಸ್.ಎಸ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಹೂವಿನಹಡಗಲಿ ಮೂಲದ 13 ವರ್ಷದ ಬಾಲಕನಲ್ಲಿ ಎ-ನೆಕ್ ಕಾಯಿಲೆ ಪತ್ತೆಯಾಗಿದೆ. ಇದೇ ಆಸ್ಪತ್ರೆಯಲ್ಲಿ ಈ ಕಾಯಿಲೆಯ ರೋಗಲಕ್ಷಣವಿರುವ 6 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗಿತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಎ-ನೆಕ್ ಕಾಯಿಲೆ ಮಕ್ಕಳಲ್ಲಿನ ಮಿಸ್ಸಿ ರೋಗ ಲಕ್ಷಣದಂತೆಯೇ ಇರುತ್ತದೆ. ಆದರೆ ಇದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದೆ. ಕೋವಿಡ್ ನಿಂದ ಗುಣಮುಖರಾಗುತ್ತಿರುವ ಮಕ್ಕಳಲ್ಲಿ ಈ ರೋಗ ಕಂಡುಬರುತ್ತಿದೆ. ದೆಹಲಿಯ ಏಮ್ಸ್ ನಲ್ಲಿ ವಯಸ್ಕರೊಬ್ಬರಲ್ಲಿ ಎ-ನೆಕ್ ಕಾಯಿಲೆ ಪತ್ತೆಯಾಗಿತ್ತು. ಇದೀಗ ಮಕ್ಕಳಲ್ಲಿ ಕಂಡುಬರುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಪಾಸಿಟಿವಿಟಿ ಇಳಿಯಿತು, ಸಾವಿನ ಪ್ರಮಾಣ ಏರಿತು; ಇಂದು 3310 ಜನರಿಗೆ ಸೋಂಕು
ಮೂರು ದಿನಗಳ ಕಾಲ ಭಾರಿ ಮಳೆ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ