Belagavi NewsBelgaum NewsKannada NewsKarnataka NewsPolitics

ತಾಯಿಗಿಂತಲೂ ಹೆಚ್ಚಿನ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತರ ಮೇಲಿದೆ – ಅಭಯ ಪಾಟೀಲ

ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುವ ಮೋಬೈಲ್ ಕೇಂದ್ರದ್ದು – ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುತ್ತಿರುವ ಮೋಬೈಲ್ ಕೇಂದ್ರದ ಮೋದಿ ಸರ್ಕಾರದ್ದು, ಅದು ನಮ್ದು, ಸೀರೆ ಮತ್ತು ಮೆಡಿಕಲ್ ಕಿಟ್ ರಾಜ್ಯ ಸರ್ಕಾರದ್ದು ಸರ್ಕಾರಗಳು ಕೊಟ್ಟಿರುವ ಸವಲತ್ತುಗಳನ್ನು ಪಡೆದು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದ್ದಾರೆ 

ನಗರದಲ್ಲಿ ಇಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೋಬೈಲ್ ಸೀರೆ ಮತ್ತು ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದ ಅಭಯ ಪಾಟೀಲ,ಮಕ್ಕಳು ಪೋಷಕರಿಂದ ಹೆಚ್ಚು ಸಮಯ  ಅಂಗನವಾಡಿ ಕಾರ್ಯಕರ್ತರ ಬಳಿ ಕಳೆಯುತ್ತಾರೆ. ತಾಯಿಗಿಂತಲೂ ಹೆಚ್ಚಿನ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತರ ಮೇಲಿದೆ.ಅಂಗನವಾಡಿಗಳಿಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕು ಮಕ್ಕಳಿಗೆ ಮಾಡುವ ಸೇವೆಯಿಂದ ಸಿಗುವ ಪುಣ್ಯ ಮತ್ತು ತೃಪ್ತಿ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಅಂಗನವಾಡಿ ಕೇಂದ್ರಗಳು ಮಕ್ಕಳ ಭವಿಷ್ಯದ ಭದ್ರ ಬುನಾದಿಯಾಗಬೇಕು ಎಂದು ಅಭಯ ಪಾಟೀಲ ಹೇಳಿದರು.

ಯಾರು ಹೆಚ್ಚು ಕೆಲಸ ಮಾಡುತ್ತಾರೆ ಅವರ ಬಗ್ಗೆ ಟೀಕೆಗಳನ್ನು ಮಾಡುವದು ಸಹಜ ಟೀಕೆಗಳು ಎದುರಾದರೆ ನಾವು ಹೆಚ್ಚು ಕೆಲಸ ಮಾಡುತ್ತಿದ್ದೇವೆ ಎಂದು ಅರ್ಥೈಸಿಕೊಂಡು ಕೆಲಸ ಮಾಡಬೇಕು ನಾನು ಶಾಸಕನಾಗಿ ಇಷ್ಟೆಲ್ಲಾ ಕೆಲಸ ಮಾಡಿದ್ರೂ ನನ್ನ ಬಗ್ಗೆಯೂ ಟೀಕೆ ಮಾಡ್ತಾರೆ, ಅದರ ಬಗ್ಗೆ ತೆಲೆ ಕೆಡಿಸಿಕೊಳ್ಳದೇ ತಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು ಎಂದರು.

ನನ್ನ ದೃಷ್ಠಿಯಲ್ಲಿ ತಾಯಿ ನಂತರ ಯಾರಿಗಾದ್ರು ಗೌರವ ಸಿಗಬೇಕೆಂದರೆ ಅದು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗಬೇಕು ಅವರು ಮಾಡುವ ಸೇವೆ ನಿಜವಾಗಿಯೂ ಪ್ರಶಂಸನೀಯ ಅತ್ಯಂತ ಕಡಿಮೆ ಸಂಬಳದಲ್ಲಿ ಅವರು ಮಾಡುವ ಸೇವೆ ಅಪ್ರತಿಮವಾಗಿದೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button