Kannada NewsKarnataka News

ರೂ. 1.74 ಕೋಟಿ ಗಳ ಕಾಮಗಾರಿಗಳಿಗೆ ಶಾಸಕ ಅನಿಲ ಬೆನಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ನಗರದ ಸಮರ್ಥನಗರ, ಮಲ್ಲಿಕಾರ್ಜುನ ನಗರ ಹಾಗೂ ಕೊನವಾಳ ಗಲ್ಲಿಯಲ್ಲಿ ಒಟ್ಟು ರೂ. ೧.೭೪ ಕೋಟಿ ಗಳ ಎಸ್.ಎಫ್.ಸಿ ಮತ್ತು ೧೪ನೇ ಹಣಕಾಸು ಯೋಜನೆ ಅನುದಾನದಡಿ ವಿವಿಧ ಅಭಿವೃಧ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ೧೪ನೇ ಹಣಕಾಸು ಯೋಜನೆ ಅನುದಾನದಡಿ ನಗರದ ಕೊನವಾಳ ಗಲ್ಲಿಯಲ್ಲಿ ರೂ ೧೪  ಲಕ್ಷ ಗಳಲ್ಲಿ ನಾಲಾ ನಿರ್ಮಾಣ ಕಾಮಗಾರಿ ಹಾಗೂ ಗ್ರಂಥಾಲಯ, ಅಂಗನವಾಡಿ ಕೇಂದ್ರದ ವಿದ್ಯುತ್ತೀರಕರಣ ಕಾಮಗಾರಿಗೆ ರೂ ೧೦ ಲಕ್ಷಗಳಲ್ಲಿ ಚಾಲನೆ ನೀಡಲಾಗಿದೆ ಎಂದರು.

ನಂತರ ಸಮರ್ಥ ನಗರದ ೧ನೇ ಮತ್ತು ೭ನೇ ಕ್ರಾಸ್ ಹಾಗೂ ಮಲ್ಲಿಕಾರ್ಜುನ ನಗರದ ೧ನೇ ಕ್ರಾಸ್‌ನಲ್ಲಿ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ರೂ. ೧.೫ ಕೋಟಿ ಗಳ ಎಸ್.ಎಫ್.ಸಿ ಅನುದಾನದಡಿ ಕಾಮಗಾರಿಗಳನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಸಾರ್ವಜನಿಕರು ಗುತ್ತಿಗೆದಾರರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಹಕರಿಸಿ ಕಾಮಗಾರಿಗಳನ್ನು ವ್ಯವಸ್ಥಿತ ರೀತಿಯಿಂದ ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಹಾಗೂ ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟತೆಯನ್ನು ಕಾಯ್ದುಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚೌಗಲಾ ಹಾಗೂ  ಮಂಜುಶ್ರೀ ಹಾಗೂ ಸಹಾಯಕ ಅಭಿಯಂತರುಗಳು,  ವ್ಹಿ. ಎಮ್. ಪತ್ತಾರ ಮತ್ತು ಕಾರ್ಯಕರ್ತರಾದ ರಾಹುಲ ಮುಚ್ಚಂಡಿ, ವಿನೋದ ಪೂಜಾರಿ, ರಾಹುಲ ಕಾಕ್ತಿಕರ, ಮಾಜಿ ಮೇಯರ್ ಸರಿತಾ ಪಾಟೀಲ, ಗುತ್ತಿಗೆದಾರರಾದ ಭರತೇಶ ಬುಡವಿ, ಮೇಘನ ಚೌಗುಲಾ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button