
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಿರ್ಮಲಾ ಸಿತಾರಾಮ ತಮ್ಮ ಚೊಚ್ಚಲ ಬಜೆಟ್ ಅನೇಕ ಜನಹಿತಕಾರಿ ಹಾಗೂ ನವ ಭಾರತ ನಿರ್ಮಾಣದ ಕನಸನ್ನು ಹೊತ್ತು ಮುಂದಿನ ೧೦ ವರ್ಷಗಳ ಗುರಿಯಿಟ್ಟುಕೊಂಡು ತಯಾರಿಸಿದ ದೇಶದ ಜನರಲ್ಲಿ ವಿಶ್ವಾಸ ಮೂಡಿಸಿದ ಬಜೆಟ್ ಆಗಿದೆ ಎಂದು ಶಾಸಕ ಅನಿಲ ಬೆನಕೆ ಪ್ರತಿಕ್ರಿಯಿಸಿದ್ದಾರೆ.
ಈ ಬಜೆಟ್‌ನಲ್ಲಿ ದೇಶದ ಆರ್ಥಿಕ ಪ್ರಗತಿ, ಗ್ರಾಮಗಳ ಅಭಿವೃದ್ಧಿ ಹಾಗೂ ಹಳ್ಳಿಗಳ ಬಡವರ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದ ಪರಿಪೂರ್ಣ ಬಜೆಟ್ ಆಗಿದೆ. ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ಕನಸನ್ನು ನನಸು ಮಾಡುವ ಸಲುವಾಗಿ ಮುದ್ರಾ ಯೋಜನೆಯಲ್ಲಿ ಮಧ್ಯಮ ವರ್ಗದ ಹಾಗೂ ಕೆಳ ವರ್ಗದ ಯುವಕರನ್ನು ನಿರುದ್ಯೋಗದಿಂದ ಮುಕ್ತರನ್ನಾಗಿಸಲು 1 ಲಕ್ಷದವರೆಗೂ ಸಾಲ ಸೌಲಭ್ಯವನ್ನು ಒದಗಿಸಿದ ಅರ್ಥಪೂರ್ಣ ಬಜೆಟ್ ಆಗಿದೆ ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ