Kannada NewsKarnataka NewsLatest

*ಗೂಂಡಾ ಕಾಯಿದೆಯಡಿ ಅನಿಲ್ ರೆಡ್ಡಿ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಹೈಟೆಕ್ ವೇಶ್ಯವಾಟಿಕೆ ಗೃಹ ನಡೆಸುತ್ತಿದ್ದ ಅನಿಲ್ ಕುಮಾರ್ ವಿ @ ಅನಿಲ್ ರೆಡ್ಡಿಯನ್ನು ಬೆಂಗಳೂರು ನಗರ ಸಿಸಿಬಿ ಮಹಿಳಾ ಸಂರಕ್ಷಣಾ ದಳದಿಂದ ವಿರುದ್ಧ ಗೂಂಡಾ ಕಾಯಿದೆಯಡಿ ಬಂಧಿಸಲಾಗಿದೆ.

ಬೆಂಗಳೂರು ನಗರ ಕೇಂದ್ರ ಅಪರಾಧ ದಳ (ಸಿಸಿಬಿ) ಅಧಿಕಾರಿಗಳು, ಬೆಂಗಳೂರು ನಗರ ಮತ್ತು ಆಂಧ್ರಪದೇಶ ರಾಜ್ಯಗಳಲ್ಲಿ ಸ್ಪಾ ಗಳ ಸೋಗಿನಲ್ಲಿ ವಿದೇಶ ಹಾಗೂ ಹೊರ ರಾಜ್ಯದ ಮಹಿಳೆಯರನ್ನು ಹೆಚ್ಚಿನ ಸಂಬಳದ ಆಮಿಷಗಳನ್ನು ಒಡ್ಡಿ ಮಾನವ ಕಳ್ಳ ಸಾಗಾಣಿಕೆ ಮುಖಾಂತರ ಕರೆಸಿಕೊಂಡು, ಅವರುಗಳನ್ನು ಅಕ್ರಮ ಬಂಧನದಲ್ಲಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯಾದ ಅನಿಲ್ ಕುಮಾರ್ ವಿ @ ಅನಿಲ್ ರೆಡ್ಡಿ @ ಅನಿಲ್, ಈತನ ಕಾನೂನು ಬಾಹಿರ ಮಾನವ ಕಳ್ಳ ಸಾಗಾಟ ವೇಶ್ಯಾವಾಟಿಕೆ ದಂಧೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಪ್ರಸ್ತಾವನೆ ಸಲ್ಲಿಸಿದ್ದರು.

ಈತನ ವಿರುದ್ಧ ಆಂಧ್ರಪ್ರದೇಶ ಮತ್ತು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈವರೆಗೆ ಮಾನವ ಕಳ್ಳ ಸಾಗಾಟ, ಅತ್ಯಾಚಾರ ಸೇರಿದಂತೆ 4 ಅಪರಾಧ ಪ್ರಕರಣಗಳು ದಾಖಲಾಗಿವೆ. ಈತನು ವೃತ್ತಿಪರ ವೇಶ್ಯಾಗೃಹಗಳನ್ನು ನಡೆಸುವುದನ್ನು ಮುಂದುವರಿಸಿದ್ದನು.

ಮಹದೇವಪುರ ಪೊಲೀಸ್ ಠಾಣೆ ಹಾಗೂ ಸಿಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಗಣಿಸಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ದಿನಾಂಕ:20.12.2024 ರಂದು ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಳ್ಳಾರಿ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದರು. ಬಂಧನ ಆದೇಶವನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಬಂಧಿತ ವ್ಯಕ್ತಿಗೆ ಜಾರಿಗೊಳಿಸಿ, ದಿನಾಂಕ:21.12.2024 ರಂದು ಬಳ್ಳಾರಿ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button