Belagavi NewsBelgaum NewsKannada NewsKarnataka News

*ಉಚಗಾಂವ ಗ್ರಾಮದ ಶ್ರೀ ಮಳೆಕರ್ಣಿ ದೇವಿ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಿಷೇಧ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಶ್ರೀ ಮಳೆಕರ್ಣಿ ದೇವಿ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ.‌ ಒಂದು ವೇಳೆ ಪ್ರಾಣಿ ಬಲಿಯಾಗಿದ್ದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಬೇರೆ ಊರುಗಳಿಂದ ಭಕ್ತರು ಬಂದು ಪ್ರಾಣಿಗಳ ಬಲಿ ಮಾಡುವದರಿಂದ ಉಚಗಾಂಗ ಗ್ರಾಮದಲ್ಲಿ ಅಸ್ವಚ್ಛತೆ ಉಂಟಾಗುತ್ತಿದೆ. ಈ ಕಾರಣದಿಂದ ಉಚಗಾಂವ ಗ್ರಾಮ ಪಂಚಾಯತ ಆಡಳಿತ ಮಂಡಳಿಯವರು ಪ್ರಾಣಿ ಬಲಿ ಆಗಬಾರದೆಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ಹಾಗಾಗಿ ಇಂದು ಉಚಗಾಂವ ಗ್ರಾಮದ ಶ್ರೀ ಮಳೆಕರ್ಣಿ ದೇವಿ ದೇವಸ್ಥಾನಕ್ಕೆ ಬೆಳಗಾವಿಯ ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ, ಬೆಳಗಾವಿ ತಹಶೀಲ್ದಾರ ಸಿದ್ದರಾಯ ಭೋಸಗಿ,  ಬೆಳಗಾವಿ ಗ್ರಾಮೀಣ ಪೊಲೀಸ್ ಉಪಾಧೀಕ್ಷಕರಾದ ಗಂಗಾರಾಮ ಬಿ.ಎಂ. ಹಾಗೂ ಕಾಕತಿಯ ಆರಕ್ಷಕ ವೃತ್ತ ನಿರೀಕ್ಷಕರಾದ ಉಮೇಶ ಎಂ, ಭೇಟಿ ನೀಡಿ, ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದರು.

ಇನ್ನು ಮುಂದೆ ಉಚಗಾಂವ ಗ್ರಾಮದ ಶ್ರೀ ಮಳೆಕರ್ಣಿ ದೇವಿ ದೇವಸ್ಥಾನಕ್ಕೆ ಬಂದು ಭಕ್ತಿ ದರ್ಶನ ಪಡೆಯಬಹುದು ಹಾಗೂ ಪೂಜಾ ಕೈಂಕರ್ಯದಲ್ಲಿ ತೊಡಗಬಹುದು. ಆದರೆ ಪ್ರಾಣಿ ಬಲಿಗೆ ಅವಕಾಶವಿಲ್ಲ. ಪ್ರಾಣಿ ಬಲಿಯಾಗಿದ್ದು ಕಂಡು ಬಂದಲ್ಲಿ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ಈ ಸಮಯದಲ್ಲಿ ಬೆಳಗಾವಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶು ಸಂಗೋಪನಾ ಇಲಾಖಾ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಗ್ರಾಮಸ್ಥರಿಗೆ ನಮವಿ ಮಾಡಲಾಗಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button