
ಮುಷ್ಕರ ಕೈ ಬಿಟ್ಟ ಲಾರಿ ಮಾಲೀಕರ ಸಂಘ
ಬೆಂಗಳೂರು: ಅನ್ನಭಾಗ್ಯ ಅಕ್ಕಿ ಸಾಗಾಣೆ ಲಾರಿ ಮಾಲೀಕರ ಮುಷ್ಕರ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಅನ್ನಭಾಗ್ಯ ಪಡಿತರ ಸಾಗಾಣಿಕೆ ವೆಚ್ಚದ ಬಾಕಿ ಹಣವನ್ನು ಬಿಡುಗಡೆ ಮಾಡಿದೆ.
ಲಾರಿ ಮಾಲೀಕರ ಸಂಘ ನಿನ್ನೆ ಮಧ್ಯರಾತ್ರಿಯಿಂದ ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದವು. ರಾಜ್ಯಾದ್ಯಂತ ಅನ್ನಭಾಗ್ಯ ಪಡಿತರ ಅಕ್ಕಿ ಸಾಗಾಣೆ ಸ್ಥಗಿತಗೊಂಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ 244 ಕೋ ಟಿ ರೂ ಬಾಕಿ ಹಣ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಬಾಕಿ ಬಿಲ್ ಹಣ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಲಾರಿ ಮಾಲೀಕರ ಸಂಘ ಮುಷ್ಕರ ಕೈಬಿಟ್ಟಿದ್ದು, ಇಂದಿನಿಂದ ಪಡಿತರ ಅಕ್ಕಿ ಸಾಗಾಣೆ ಆರಂಭವಾಗಿದೆ.