Kannada NewsLatest

ಜನ ಸೇವೆಗೆ ಜೀವನ ಮುಡಿಪಾಗಿಟ್ಟ ಸಂಸದ ಅಣ್ಣಸಾಹೇಬ ಜೊಲ್ಲೆ : ಕೇಂದ್ರ ಸಚಿವರ ಶ್ಲಾಘನೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಸಮಾಜದ ವಿವಿಧ ರಂಗಗಳಲ್ಲಿ ತಮ್ಮ ಸೇವೆ ಸಲ್ಲಿಸುವ ಮೂಲಕ ಸಂಸದ ಅಣ್ಣಾಸಾಹೇಬ ಜೊಲ್ಲೆ ಜನಸೇವೆಗೆ ತಮ್ಮ ಜೀವನ ಮೀಸಲಾಗಿಟ್ಟಿದ್ದಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ನಿಪ್ಪಾಣಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರಖಾನೆಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 60ನೇ ಹುಟ್ಟು ಹಬ್ಬ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಹಕಾರ ಸಂಸ್ಥೆ ಪ್ರಾರಂಭಿಸಿ ಕೃಷಿ, ಶಿಕ್ಷಣ, ಕೈಗಾರಿಕೆ, ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಂಸದರಾಗಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವರಾಗಿ ಶಶಿಕಲಾ ಜೊಲ್ಲೆ ದಂಪತಿ ಸದಾ ಹೊಸತನದೊಂದಿಗೆ ಈ ಭಾಗದಲ್ಲಿ ಜನರ ಜೀವನಕ್ಕೆ ಅನುಕೂಲಗಳನ್ನು ಒದಗಿಸಲು ಪ್ರಯತ್ನಶೀಲ ಕಾರ್ಯ ಮಾಡುತ್ತಲಿದ್ದಾರೆ ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನದಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸುಮಾರು 2 ಸಾವಿರ ಜನರಿಗೆ 75ಲಕ್ಷ ಮೊತ್ತದ ಸಾಮಗ್ರಿಗಳು ಅಂಗವಿಕಲರಿಗೆ ಹಾಗೂ ಹಿರಿಯ ನಾಗರಿಕರಿಗೆ ದೊರೆತಿದ್ದು, ಪತಿಯಾಗಿ ನನ್ನ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಅವರ ಪಾತ್ರ ಹಿರಿದಾಗಿದೆ ಎಂದರು.
ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರದು ನನ್ನದು 20 ವರ್ಷದ ಸಂಬಂಧ ಇವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ. ಹೀಗಾಗಿ ಜೊಲ್ಲೆ ಎಂದರೆ ಯಶಸ್ಸು ಎನ್ನುವ ಮಾತು‌ನನಗೆ ನೆನಪಿಗೆ ಬರುತ್ತದೆ ಎಂದರು.
ಸಂಸದ‌ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರತಿಯೊಬ್ಬರು ತಾವು‌ ಮಾಡುವ ಕಾರ್ಯದಲ್ಲಿ ಶೃದ್ಧೆ ಹಾಗೂ ವಿಶ್ವಾಸವನ್ನಿಟ್ಟು ತಮ್ಮ ಗುರಿ ತಲುಪುವವರೆಗೂ ನಿರಂತರ ಪರಿಶ್ರಮಪಡಬೇಕು. ನಾವು ಮಾಡುವ ಕಾರ್ಯಗಳು ಸಮಾಜಮುಖಿಯಾಗಿದ್ದಾಗ ಆ ಪ್ರಯತ್ನಕ್ಕೆ ಎಲ್ಲರ ಬೆಂಬಲ ಸಿಗುತ್ತದೆ. ಇದಕ್ಕೆ ನಾನೇ ಉದಾಹರಣೆಯಾಗಿದ್ದೇನೆ. ಸಂಸದನಾಗಿ ಈ ಭಾಗಕ್ಕೆ ಅನುಕೂಲ ಕಲ್ಪಿಸಲು ಯೋಜನೆಗಳ ಜಾರಿಗೆ ಶ್ರಮಿಸಿದ್ದು,  ನನ್ನ ಹುಟ್ಟು ಹಬ್ಬ ಆಯೋಜಿಸಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದರು.
ಕನ್ಹೆರಿ‌ಮಠದ ಅ.10ರಂದು ಆಯೋಜಿಸಲಾದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಲಿದ್ದು ಈ ಭಾಗದ ಹೆಚ್ಚಿನ ಜನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದರು. ಅಲ್ಲದೇ ಅ.15ರಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದರು.
ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ‌ ಆಶೀರ್ವಚನ ನೀಡಿದರು.. ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಅಂಗವಿಕಲರಿಗೆ ಸಲಕರಣೆ ವಿತರಿಸಿದರು. ಜೊಲ್ಲೆ ಕುಟುಂಬ ನಡೆದು ಬಂದ ದಾರಿಯ ಕುರಿತು ಡಾಕ್ಯೂಮೆಂಟರಿ ಹಾಗೂ ಜೊಲ್ಲೆ ಗ್ರುಪ್ ಸಹಕಾರಿ ಸಂಸ್ಥೆಯ ಆನಲೈನ ಲೋನ್ ಆ್ಯಪ್ ಬಿಡುಗಡೆಗೊಳಿಸಲಾಯಿತು.
https://pragati.taskdun.com/politics/valmiki-jayantianil-benakebelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button