Kannada NewsKarnataka News

ಮುರಗೋಡ ತಾಲೂಕು ರಚಿಸಿ, ಇಲ್ಲದಿದ್ದರೆ……. : ಸಿಎಂಗೆ ಮನವಿ ಸಲ್ಲಿಕೆ

ಮುರಗೋಡ ಹೋಬಳಿ ಕಂದಾಯದ ದೃಷ್ಟಿಯಲ್ಲಿ ಸವದತ್ತಿ ತಾಲೂಕಿಗೆ ಒಳಪಟ್ಟರೆ ಚುನಾವಣೆಯಲ್ಲಿ ಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಟ್ಟಿದ್ದರಿಂದ ರಾಜಕೀಯವಾಗಿ ಅಭಿವೃದ್ಧಿ ಪರ ಯಾವ ಕಾರ್ಯಗಳು ಆಗುತ್ತಿಲ್ಲ. ಈ ಹೋಬಳಿಯ ಅರಣ್ಯ ವಿಭಾಗ, ಪಿ‌ ಎಮ್ ಜಿ ಎಸ್ ವಾಯ್, ನೀರಾವರಿ ಕಛೇರಿಗಳು ಗೋಕಾಕ ವಿಭಾಗಕ್ಕೆ ಒಳಪಟ್ಟಿವೆ. ಇನ್ನು ಪಿಡಬ್ಲೂಡಿ, ಆರ್ ಟಿ ಓ ಕಛೇರಿಗಳು ಬೈಲಹೊಂಗಲಕ್ಕೆ ಒಳಪಟ್ಟರೆ, ಪೊಲಿಸ್ ಇಲಾಖೆಯ ಉಪವಿಭಾಗ ರಾಮದುರ್ಗ ವೃತ್ತಕ್ಕೆ ಒಳಪಟ್ಟಿದೆ. ಎಸ್ ಎಲ್‌ ಓ ಕಛೇರಿ ಬಾಗಲಕೋಟಕ್ಕೆ ಸೆರ್ಪಡೆಯಾಗಿದೆ.

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಟ್ಟ ಸವದತ್ತಿ ತಾಲೂಕಿನ ಗ್ರಾಮಗಳನ್ನು ಒಟ್ಟುಗೂಡಿಸಿ ಮುರಗೋಡ ತಾಲೂಕ ರಚಿಸಿ ಇಲ್ಲದಿದ್ದರೆ ಬೈಲಹೊಂಗಲ ತಾಲೂಕಿಗೆ ಸೆರ್ಪಡೆಗೊಳಿಸಿ ಎಂದು ಶಂಕರಯ್ಯ ಮಲ್ಲಯ್ಯನವರಮಠ, ಎಫ್.ಎಸ್.ಸಿದ್ದನಗೌಡರ, ಸುರೇಶ್ ಮ್ಯಾಕಲ್, ಮುರಳಿಧರ ಹುಲ್ಲೂರು ನೇತೃತ್ವದಲ್ಲಿ  ರವಿವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ನೀಡಿದರು.
    ನ್ಯಾಯವಾದಿ ಎಫ್.ಎಸ್‌.ಸಿದ್ದನಗೌಡರ ಮನವಿ ನೀಡಿ ಮಾತನಾಡಿ, ಬಾಂಬೆ ಸರ್ಕಾರದಲ್ಲಿ  ಮುರಗೋಡ ತಾಲೂಕಾ ಸ್ಥಾನವಾಗಿತ್ತು. ಕರ್ನಾಟಕ ರಾಜ್ಯ ಉದಯವಾದನಂತರ ತಾಲೂಕಾ ಪಟ್ಟ ಕಳಚಿದ ನಂತರ  ಕಳೆದ 45ವರ್ಷಗಳಿಂದ ಈ ಭಾಗದಲ್ಲಿ ಹೋರಾಟ ನಡೆದರೂ ಪ್ರಯೋಜನವಾಗಿಲ್ಲ. ಜನಪ್ರತಿನಿದಧಿಗಳ ಅಸಡ್ಡೆ ಹಾಗೂ ಸರ್ಕಾರಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾದ ಈ ಭಾಗ ಅತಿಯಾದ ತೊಂದರೆಗೀಡಾಗಿದೆ.
ಮುರಗೋಡ ಹೋಬಳಿ ಹಳ್ಳಿಗಳು ಸವದತ್ತಿ ತಾಲುಕಾ ಕೇಂದ್ರದಿಂದ 65ಕೀಮಿ ಅಂತರದಲ್ಲಿವೆ. ಬೈಲಹೊಂಗಲ ಕೇವಲ 3 ಕಿಮೀ ಅಂತರದಲ್ಲಿ ಅವೈಜ್ಞಾನಿಕ ತಾಲೂಕಾ ಗಡಿ ಪ್ರಾರಂಭವಾಗುತ್ತದೆ.
ಮುರಗೋಡ ಹೋಬಳಿ ಕಂದಾಯದ ದೃಷ್ಟಿಯಲ್ಲಿ ಸವದತ್ತಿ ತಾಲೂಕಿಗೆ ಒಳಪಟ್ಟರೆ ಚುನಾವಣೆಯಲ್ಲಿ ಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಟ್ಟಿದ್ದರಿಂದ ರಾಜಕೀಯವಾಗಿ ಅಭಿವೃದ್ಧಿ ಪರ ಯಾವ ಕಾರ್ಯಗಳು ಆಗುತ್ತಿಲ್ಲ. ಈ ಹೋಬಳಿಯ ಅರಣ್ಯ ವಿಭಾಗ, ಪಿ‌ ಎಮ್ ಜಿ ಎಸ್ ವಾಯ್, ನೀರಾವರಿ ಕಛೇರಿಗಳು ಗೋಕಾಕ ವಿಭಾಗಕ್ಕೆ ಒಳಪಟ್ಟಿವೆ. ಇನ್ನು ಪಿಡಬ್ಲೂಡಿ, ಆರ್ ಟಿ ಓ ಕಛೇರಿಗಳು ಬೈಲಹೊಂಗಲಕ್ಕೆ ಒಳಪಟ್ಟರೆ, ಪೊಲಿಸ್ ಇಲಾಖೆಯ ಉಪವಿಭಾಗ ರಾಮದುರ್ಗ ವೃತ್ತಕ್ಕೆ ಒಳಪಟ್ಟಿದೆ. ಎಸ್ ಎಲ್‌ ಓ ಕಛೇರಿ ಬಾಗಲಕೋಟಕ್ಕೆ ಸೆರ್ಪಡೆಯಾಗಿದೆ.
ಹೀಗೆ ಪಟ್ಟಿ ಮಾಡುತ್ತಾ ಹೋದರೆ ಈ ಭಾಗದ ಜನ ಜೀವನ ಅಯೋಮಯವಾಗಿದೆ. ಸರ್ಕಾರಿ ಸೌಲಭ್ಯಗಳಿಗೆ, ದಿನನಿತ್ಯದ ವ್ಯವಹಾರದ ಕಾಗದ ಪತ್ರಗಳ ಸಂಗ್ರಹಕ್ಕೆ ಪ್ರತಿ ಮನೆಯಿಂದ ಒಬ್ಬರು ಖಾಯಂ ಆಗಿ ಕೆಲಸನಿರ್ವಹಿಸಬೇಕಾಗಿದೆ ಎಂದರು.
ಮುರಳಿಧರ ಹುಲ್ಲೂರು, ಸುರೇಶ್ ಮ್ಯಾಕಲ್ ಮಾತನಾಡಿ, ನಮ್ಮ ಹಿರಿಯರು ಮಾಡುತ್ತಿರುವ ಕಳೆದ 40 ವರ್ಷದ ಮುರಗೋಡ ತಾಲೂಕಾ ಹೊರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ. ಈ ಹೋಬಳಿಗೆ ಮತ್ತೊಂದು ಬರೆ ಎನ್ನುವಂತೆ ಯರಗಟ್ಟಿ ತಾಲೂಕು ರಚಿಸಿ ಅಲ್ಲಿ ಸೇರಿಸುವ ತೆರೆಮೆರೆಯಲ್ಲಿ ಕಾರ್ಯ ಪ್ರಾರಂಭವಾಗಿದೆ. ಈ ಬಗ್ಗೆ ಮುರಗೋಡದಲ್ಲಿ ಈ ಭಾಗದ ಸ್ವಾಮಿಜಿಗಳು, ನಾಯಕರು, ಸವದತ್ತಿ, ಬೈಲಹೊಂಗಲ ಶಾಸಕರು ಹಾಗೂ ಉಪವಿಭಾಗಧಿಕಾರಿಗಳು ಮತ್ತು ಎಲ್ಲ ಕಂದಾಯ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರು, ತಾಪಂ ಜಿಪಂ‌ ಎಪಿಎಂಸಿ ಸದಸ್ಯರ  ಸಮ್ಮುಖದಲ್ಲಿ ಸಭೆ ಸೇರಿ
ಮುರಗೋಡ ತಾಲೂಕಾ ಕೇಂದ್ರವಾಗಿ ಘೋಷಿಸಬೇಕು. ಇಲ್ಲದಿದ್ದರೆ ಬೈಲಹೊಂಗಲ ತಾಲೂಕಿಗೆ ಸೆರ್ಪಡೆ ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಸವದತ್ತಿ ತಹಶಿಲ್ದಾರರು ಮಾಡಿದ ವರದಿ ಪ್ರತಿ ಮನವಿ ಜೊತೆ ಅರ್ಪಿಸಿದರು.
ಮುನೀರ್ ಶೇಖ, ವೀರೇಶ ಹಲಕಿ, ಗೌಡಪ್ಪ ಹೊಸಮನಿ, ಮಹೇಶ್ ಹುಡೆದ, ತಿಪ್ಪಣ್ಣ ಮ್ಯಾಕಲ ಮಾತನಾಡಿ, ಮುರಗೋಡ ಹೋಬಳಿಯನ್ನು ತಾಲೂಕಾ ಕೇಂದ್ರವನ್ನಾಗಿಸಬೇಕು. ಇಲ್ಲದಿದ್ದರೆ ಸಮೀಪದ ಬೈಲಹೊಂಗಲ ತಾಲೂಕಿಗೆ ಸೆರ್ಪಡೆಗೊಳಿಸಿ ಹೊಸೂರ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸಬೇಕು. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳಲು ತಡಮಾಡಿದರೆ ಬೈಲಹೊಂಗಲ ಪಟ್ಟಣದಲ್ಲಿ ನಿರಂತರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದರು.
ಆಡಳಿತ ದೃಷ್ಟಿಯಿಂದ  ಮುರಗೋಡ ಹೋಬಳಿಯ ಸುತಗಟ್ಟಿ, ಏಣಗಿ,ಹಿಟ್ಟಣಗಿ, ಗೋವನಕೊಪ್ಪ ಕೆವೈ, ಭಮನಗುಂಡಿಕೊಪ್ಪ ಗ್ರಾಮಗಳನ್ನು ಸಮೀಪದ ಸವದತ್ತಿ ಹೋಬಳಿಗೆ ಸೆರ್ಪಡೆ ಮಾಡಬೇಕು.ದೂರದ ಸವದತ್ತಿ ಹೋಬಳಿಯಲ್ಲಿರುವ ಬಡ್ಲಿ, ಕಾತ್ರಾಳ, ಆಲದಕಟ್ಟಿಕೆವೈ, ಧೂಪದಾಳ, ಯಕ್ಕುಂಡಿ, ಕಾರ್ಲಕಟ್ಟಿ, ವೆಂಕಟೇಶ ನಗರ, ಚಕ್ರಗೇರಿ, ಗಣಿಯಾಲ ಹಾಗೂ ಮುರಗೋಡ ಹೋಬಳಿಯಲ್ಲಿರುವ ಹೊಸೂರ, ಮಲ್ಲೂರ, ಇಂಗಳಗಿ, ಕಾಗಿಹಾಳ, ಸೊಗಲ, ಮಾಟ್ಟೋಳ್ಳಿ, ಕಾರಿಮನಿ ದುಂಡನಕೊಪ್ಪ, ಚಿಕ್ಕೊಪ್ಪ, ಹೀರೆಕೊಪ್ಪ, ಸೇರಿ ನೂತನ ಹೊಸೂರ ಹೋಬಳಿ ಘೋಷಿಸಬೇಕು. ಮುರಗೋಡ ಹೋಬಳಿಯಲ್ಲಿರುವ ಇಂಚಲ ಮುತವಾಡ, ಮರಕುಂಬಿ ಬೈಲಹೊಂಗಲ ಹೋಬಳಿಗೆ ಸೆರ್ಪಡೆಯಾಗಬೇಕು. ಮುರಗೋ ಹೋಬಳಿಯಲ್ಲಿ ಉಳಿದ ಹುಲಿಕೇರಿತಾಂಡಾ, ಮಹಾಂತೇಶ ನಗರ, ಹಲಕಿ, ತಡಸಲೂರು, ಚಿಕ್ಕಬೂದನೂರು, ಮಳಗಲಿ, ಓಬಲದಿನ್ನಿ, ಕುಟರನಟ್ಟಿ, ಹೀರೆಬುದನೂರು, ಶಿವನಗರ, ರಾಮಾಪೂರ, ಸುಬ್ಬಾಪೂರ, ಗಿರಿನಗರ, ಗೊಂತಮಾರ, ಹಾರುಗೊಪ್ಪ, ಚಚಡಿ ಮತ್ತು ಮುರಗೋಡ ಗ್ರಾಮಗಳು ಯಾವುದೇ ಕಾರಣಕ್ಕೂ ನೂತನ ಯರಗಟ್ಟಿ ತಾಲೂಕಿಗೆ ಸೆರ್ಪಡೆಯಾಗುವದಿಲ್ಲ ಎಂದು ಗ್ರಾಮ ಪಂಚಾಯತಿಯಲ್ಲಿ ಠರಾವ ಮಾಡಿ ಗ್ರಾಮಸ್ಥರು ಓಕ್ಕೂರೂಲಿನಿಂದ ಮುರಗೋಡ ಹೋಬಳಿಯಲ್ಲಿ ಇರುವದಾಗಿ ಶಾಸಕರ ಹಾಗೂ ಉಪವಿಭಾಗಧಿಕಾರಿಗಳ ಮುಂದೆ ಗ್ರಾಮಸ್ಥರು ನಿರ್ಣಯಿಸಿದ್ದಾರೆ. ಈ ರೀತಿಯಾಗಿ ತಾಲೂಕಾ ವಿಂಘಡನೆಯಾಗಬೇಕು ಎಂಬ ಕೂಗೂ 40 ಹಳ್ಳಿಗಳಲ್ಲಿ ಪ್ರಾರಂಭವಾಗಿರುವದನ್ನು ಮನವಿಯಲ್ಲಿ ಕಾಣಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button