
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಹೊಸದಾಗಿ 12 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಬೆಳಗಾವಿಯಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾಗಿದ್ದು, 42ಕ್ಕೇರಿದೆ.
ಮೈಸೂರು 3, ಮಂಡ್ಯದಲ್ಲಿ 2, ಬಾಗಲಕೋಟೆ 2, ಕಲಬುರ್ಗಿ 2, ಬೆಳಗಾವಿ, ಧಾರವಾಡ, ವಿಜಯಪುರದಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಕಲಬುರ್ಗಿಯಲ್ಲಿ 16 ವರ್ಷದ ಬಾಲಕನಿಗೆ ಸೋಂಕು ಪತ್ತೆಯಾಗಿದೆ.
ನಂಜನಗೂಡು, ಬಾಗಲಕೋಟೆ, ಧಾರವಾಡ ಮತ್ತು ಗದಗದಲ್ಲಿ ಪತ್ತೆಯಾಗಿರುವುದು ಸೆಕೆಂಡರಿ ಕಾಂಟಾಕ್ಟ್ ಎನ್ನುವುದು ಖಚಿತವಾಗಿದೆ.
ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಇಂದು ೊಂದು ಪ್ರಕರಣ ದಾಖಲಾಗಿದೆ. ಹಿರೇಬಾಗೇವಾಡಿಯ 45 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದ್ದು, ಈತ 128ನೇ ನಂಬರ್ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ