
ಪ್ರಗತಿಚಾಹಿನಿ ಸುದ್ದಿ, ಬೆಳಗಾವಿ: ಶಹಾಪುರದ ಹುಣಪತ್ತಿ ಕಾಲೋನಿಯಲ್ಲಿ ಜಾಗ ಭೂಸ್ವಾಧಿನ ಪಡಿಸಿಕೊಂಡ ಪಾಲಿಕೆಯ ವಿರುದ್ಧ ನ್ಯಾಯಾಲಯ 75 ಲಕ್ಷ ರೂ. ಪರಿಹಾರ ಕೊಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಜಪ್ತು ಮಾಡಲು ಬಂದಿದ್ದ ಸಂತ್ರಸ್ತರಿಗೆ ಇಲ್ಲಿನ ಸಿಬ್ಬಂದಿಗಳು ನಿರಾಕರಿಸಿದ ಪರಿಣಾಮ ಪಾಲಿಕೆ ಉಪ ಆಯುಕ್ತರ ಕಾರ್ ಗೆ ನ್ಯಾಯಾಲಯದ ಆದೇಶ ಪ್ರತಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ಪಾಲಿಕೆಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಕೀಲ ಇಂದ್ರಜಿತ್ ಬಡವನಾಚೆ, ಕಳೆದ 15 ವರ್ಷಗಳ ಹಿಂದೆ ಪಾಲಿಕೆಯವರು ಶಹಾಪುರದ ಹುಣಪತ್ತಿ ಕಾಲೋನಿಯಲ್ಲಿ ಜಾಗವನ್ನು ಭೂಸ್ವಾಧಿನ ಪಡಿಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ನಾವು ಹೈಕೋರ್ಟ್ ನಲ್ಲಿ ಹೋರಾಟ ನಡೆಸಿ ಪಾಲಿಕೆ 75 ಲಕ್ಷ ರೂ. ಪರಿಹಾರ ಕೊಡಬೇಕು. ಇಲ್ಲವೇ ಇಲ್ಲಿನ ವಸ್ತುಗಳನ್ನು ಜಪ್ತಿ ಮಾಡಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಇದು ನ್ಯಾಯಾಲಯದ ಉಲ್ಲಂಘನೆಯಾಗುತ್ತದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ