FoodsKannada NewsKarnataka NewsNational

*ಗ್ರಾಹಕರಿಗೆ ಮತ್ತೆ ಶಾಕ್: ಅಡುಗೆ ಎಣ್ಣೆ ಬೆಲೆ ಮತ್ತೆ ಏರಿಕೆ*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಇದರ ನಡುವೆಯೇ ಜನಸಾಮಾನ್ಯರಿಗೆ ಬಿಗ್ ಶಾಕ್ ವೊಂದು ಎದುರಾಗಿದ್ದು, ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿದೆ. ಇದರಿಂದ ಗ್ರಾಹಕರಿಗೆ ತೀವ್ರ ಆಘಾತವಾಗಿದೆ.

ಅ.31 ರಿಂದ ದೀಪಾವಳಿ ಹಬ್ಬ ಆರಂಭವಾಗಲಿದ್ದು, ಜನರೆಲ್ಲ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ನಡುವೆ ಎಣ್ಣೆಯ ರೇಟ್ ಜಾಸ್ತಿ ಆಗಿದ್ದು, ಮಾರುಕಟ್ಟೆಯಲ್ಲಿ ಪಾಮ್ ಆಯಿಲ್, ಸೋಯಾಬಿನ್ ಹಾಗೂ ಸೂರ್ಯಕಾಂತಿ ರಿಫೈಂಡ್ ಎಣ್ಣೆ ದರ ಹೆಚ್ಚಳವಾಗಿದ್ದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

Related Articles

ಮಾರುಕಟ್ಟೆಯಲ್ಲಿ ಕಳೆದ ತಿಂಗಳು 100 ರೂ. ಇದ್ದ ತಾಳೆ ಎಣ್ಣೆ ಇಂದು ರೂ. 137 ಗೆ ಏರಿಕೆಯಾದರೆ, ಸೋಯಾಬೀನ್ ರೂ. 120 ರಿಂದ 148 ರೂ.ಗೆ ಜಂಪ್ ಆಗಿದೆ. ಇನ್ನು ಸೂರ್ಯಕಾಂತಿ ರೂ. 120 ನಿಂದ 149 ರೂ.ಗೆ ಏರಿದೆ. ಸಾಸಿವೆ ಎಣ್ಣೆ 140 ರಿಂದ 180ಕ್ಕೆ ಕಡಲೆ ಎಣ್ಣೆ 180 ರಿಂದ 184 ರೂಪಾಯಿಗೆ ಏರಿಕೆಯಾಗಿದೆ.

Home add -Advt

Related Articles

Back to top button