

ಪ್ರಗತಿವಾಹಿನಿ ಸುದ್ದಿ, ಮೂಡಿಗೆರೆ: ಧರ್ಮಸ್ಥಳಕ್ಕೆ ಹೊರಟಿದ್ದ ವೃದ್ದರೋರ್ವರು ಸೋಮವಾರ (ಆಗಸ್ಟ್ 18, 2025) ಮಧ್ಯಾಹ್ನದ ಹೊತ್ತಿಗೆ ಮೂಡಿಗೆರೆ ಬಳಿ ಮೃತಪಟ್ಟಿದ್ದು, ಅವರ ಪರಿಚಯವಿದ್ದವರು ಕೂಡಲೆ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ.
ಆಧಾರ ಕಾರ್ಡ್ ದಾಖಲೆ ಪ್ರಕಾರ, ಸತ್ಯನಾರಾಯಣ ಕೃಷ್ಣಪ್ಪ ಎನ್ನುವ 84 ವರ್ಷದ ವ್ಯಕ್ತಿ ಬಸ್ ನಲ್ಲಿ ತೆರಳುತ್ತಿದ್ದಾಗ ಹೃದಯಾಘಾತವಾಗಿದೆ. ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಲಿಲ್ಲ. ಅವರ ಆಧಾರ ಕಾರ್ಡ್ ನಲ್ಲಿ ಧಾರವಾಡದ ಶ್ರೀಕೃಷ್ಣ ಭವನದ ವಿಳಾಸವಿದೆ.
ಆದರೆ ಸಾಯುವ ಮುನ್ನ ಮಾತನಾಡಿದ್ದು, ತಾವು ಬೆಳಗಾವಿಯವರು ಎಂದು ಹೇಳಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರ ಸಂಬಂಧಿಕರು ಯಾರಾದರೂ ಇದ್ದರೆ ಮೂಡಿಗೆರೆ ಪೊಲೀಸ್ ಠಾಣೆಯ ನಂಬರ್ 08263-220333, 8660494997, 9480805150 ಸಂಖ್ಯೆ ಸಂಪರ್ಕಿಸಬಹುದು.
ಸ್ಥಳೀಯರೊಬ್ಬರು ಪ್ರಗತಿವಾಹಿನಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನು ಹೆಚ್ಚಿನ ಗ್ರುಪ್ ಗಳಿಗೆ ಶೇರ್ ಮಾಡಿ.