ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಎಪಿಎಮ್‌ಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಅಂತರರಾಜ್ಯ ವಂಚಕರನ್ನು ಬಂಧಿಸಿದ್ದಾರೆ.
ಅವರಿಂದ ಒಟ್ಟು ರೂ.೬,೦೯,೦೦೦ ಮೌಲ್ಯದ ಬಂಗಾರ, ನಗದು & ಮೋಟರ್ ಸೈಕಲ್‌ಗಳನ್ನು ಜಪ್ತಿ ಮಾಡಿದ್ದಾರೆ.
ದಿನಾಂಕ. ೨೯/೧೧/೨೦೨೨ ಎ.ಪಿ.ಎಮ್.ಸಿ ಪೊಲೀಸ್ ಠಾಣೆಯ ವ್ಯಾಪ್ತಿಯ ಮುರಳಿಧರ
ಕಾಲನಿಯ ಸೋಮಲಿಂಗ ಅಮ್ಮಣಗಿರವರ ಎ.ಟಿ.ಎಮ್ ಕಾರ್ಡನ್ನು ಬದಲಾಯಿಸಿಕೊಂಡು ಅವರ
ಎ.ಟಿ.ಎಮ್ ಕಾರ್ಡಿಂದ ೪,೦೩,೭೮೯/- ರೂಗಳನ್ನು ತೆಗೆದುಕೊಂಡು ಮೋಸ ಮಾಡಿದ ಬಗ್ಗೆ
ಎ.ಪಿ.ಎಮ್.ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .
ಪಿಐ ರಮೇಶ ಸಿ ಅವಜಿ ನೇತೃತ್ವದಲ್ಲಿ ಸಿಬ್ಬಂದಿಯ ತಂಡ ದಿನಾಂಕ: ೦೯-೦೩-೨೦೨೩ ರಂದು ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿದ್ದು ,
೧) ಅಮೋಲ್ ಭಗವನ್ ಶೆಂಡೆ, ಸಾ: ನೇಸರಿ, ತಾ: ಗಡಹಿಂಗ್ಲಿಜ್ ಜಿಲ್ಲಾ: ಕೊಲ್ಲಾಪೂರ
೨) ಶ್ರವಣ ಸತೀಶ ಮಿನಜಗಿ, ಸಾ:ನ ಕೇದಾಋನಾಥ ನಗರ, ಎಮ್‌ಐಡಿಸಿ ತಾ: ಜಿ: ಸೊಲ್ಲಾಪೂರ
ಇವರನ್ನು ಬಂಧಿಸಿ ಅವರಿಂದ ೧) ೧,೧೦,೦೦/- ರೂ ಮೌಲ್ಯದ ೨೦ ಗ್ರಾಂ ಬಂಗಾರದ
ಆಭರಣಗಳು, ೨) ನಗದು ಹಣ ೧.೩೯,೦೦೦/- ೩) ಒಟ್ಟು ರೂ.೩.೬೦.೦೦೦ ಮೌಲ್ಯದ ೦೨
ಮೋಟಾರ್ ಸೈಕಲ್ ಗಳು ಹೀಗೆ ಒಟ್ಟು ೬,೦೯,೦೦೦/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲಿ ಶ್ರಮಿಸಿದ ಪಿಐ ಎಪಿಎಂಸಿ
ಹಾಗೂ ಸಿಬ್ಬಂದಿಯ ತಂಡಕ್ಕೆ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ