ಪಿಸಿ, ಪಿಎಸ್ಐ ಹುದ್ದೆ ಅರ್ಜಿ ಶುಲ್ಕ 14 ಕೋಟಿ ರೂ. !

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ  2019 – 20ನೇ ಸಾಲಿನಲ್ಲಿ 3,566 ಪೊಲೀಸ್ ಕಾನ್ ಸ್ಟೆಬಲ್ ಮತ್ತು ಪಿಎಸ್ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಿದಾಗ ಬಂದ ಅರ್ಜಿಗಳ ಸಂಖ್ಯೆ 8,10,818. ಇದರಿಂದ ಸಂಗ್ರಹವಾದ ಅರ್ಜಿ ಶುಲ್ಕ 13,91,92,235 ರೂ.
ಶಾಸಕ ಮುನಿರಾಜು ಅವರ ಪ್ರಶ್ನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ವಿವರ ನೀಡಿದ್ದಾರೆ.
ನೇಮಕಾತಿ ಪ್ರಕ್ರಿಯೆಗಾಗಿ ಸರಕಾರವು 13,07,00,000 ರೂ. ಒದಗಿಸಿದೆ. ಅರ್ಜಿಯ ಶುಲ್ಕ 100ರೂ, ಮತ್ತು 250 ರೂ. ನಿಗದಿಪಡಿಸಲಾಗಿತ್ತು. 8,10,818 ಅರ್ಜಿಗಳು ಬಂದಿದ್ದವು. ಅರ್ಜಿ ಶುಲ್ಕದಿಂದ ಸರಕಾರಕ್ಕೆ ಬಂದಿರುವ ಹಣ: 13,91,92,235 ರೂ.
ಪರೀಕ್ಷೆ ಪ್ರಕ್ರಿಯೆಗೆ ಮಾಡುವ ವೆಚ್ಚ ಹಾಗೂ ಅರ್ಜಿ ಶುಲ್ಕ ಎರಡೂ ಹುಬ್ಬೇರಿಸುವಂತಿದೆ.
ಸಚಿವರ ಉತ್ತರದ ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿusq1411(23092021)

 

ಜನಪ್ರಿಯ ನಾಯಕರಿಗಿಂತ ಜನಪರ ನಾಯಕರನ್ನು ಜನ ಆಶಿಸುತ್ತಾರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Home add -Advt

Related Articles

Back to top button