ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲು ಅರ್ಹರಿಂದ ನಾಮನಿರ್ದೇಶನ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರವು, ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಯನ್ನು ತರುವ ಮೂಲಕ ನಾಗರಿಕರಿಗೆ ಗುಣಮಟ್ಟದ ಸೇವೆಯ ವಿತರಣೆ, ನಾಗರಿಕ ಸೇವಾ ವ್ಯವಸ್ಥೆಯಲ್ಲಿ ಗುಣಾತ್ಮಕ, ನಾಗರಿಕ ಸ್ನೇಹಿ ಮತ್ತು ಭ್ರಷ್ಟಾಚಾರ ರಹಿತ ವಾತಾವರಣ ನಿರ್ಮಾಣ, ಮೌಲ್ಯವರ್ಧಿತ ಸೇವೆ, ವೃದಿ, ಮುಂದಾಳತ್ವ ಮತ್ತು ಚಲನಶೀಲಗಳ ರಚನೆ, ನಾಗರಿಕ ಅವಶ್ಯಕತೆಗನುಗುಣವಾಗಿ ವಿನೂತನ ಪದ್ಧತಿ ಅಳವಡಿಸುವದು. ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅತ್ಯುನ್ನತ ಕಾರ್ಯನಿರ್ವಹಣೆ ಸಹಜ ಕಾರ್ಯನಿರ್ವಹಣೆಯೊಂದಿಗೆ ನಾಗರಿಕರಿಗೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೀತಿಯ ಸೇವೆಗಳನ್ನು ಒದಗಿಸಿದವರನ್ನು ಮತ್ತು ಕಚೇರಿ ಪರಿಸರದಲ್ಲಿ ವಿಶೇಷ ವಿಭಿನ್ನ ಸಾಧನೆಯನ್ನು ಮಾಡುವುದು, ಇಲಾಖೆ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತಂದು ಅದ್ಭುತವಾದ ರೀತಿಯಲ್ಲಿ ಗಣನೀಯ ಕಾರ್ಯನಿರ್ವಹಣೆ, ವಿನೂತನತೆಯನ್ನು ಕಾರ್ಯರೂಪಕ್ಕೆ ತರುವುದು ಮತ್ತು ರಚನಾತ್ಮಕ ರೀತಿಯಲ್ಲಿ ಮುಂದಾಳತ್ವ ವಹಿಸುವಿಕೆ, ನಾಗರಿಕರಿಗೆ ನೀಡುವ ಸೇವೆಯಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡುವುದು ದೀರ್ಘ ಸಮಯದ ಫಲಿತಾಂಶ ಸಾಧನೆ, ನಿಗದಿತ ಫಲಿತಾಂಶ ಸಾಧನೆಗೆ ಸರಳೀಕೃತ ಕಾರ್ಯವಿಧಾನ ವ್ಯವಸ್ಥೆ ಸರ್ಕಾರದ ಸಾರ್ವಜನಿಕ ಹಣದ ಉಳಿತಾಯ ಮಾಡಿದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.
೧೦ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು, ರೂ. ೨೫ ಸಾವಿರ ನಗದು ಬಹುಮಾನವಿರುವ ಪ್ರಶಸ್ತಿಗಳನ್ನು (ಪ್ರತಿ ಜಿಲ್ಲೆಗೆ) ನೀಡಲಾಗುತ್ತದೆ. ರಾಜ್ಯ ಸರ್ಕಾರಿ ನೌಕರರು ನಾಮನಿರ್ದೇಶನಗಳನ್ನು online (http://dparar.karnataka.gov.in/ http://sarvothamaawards.karnataka.gov.in/) ಏಪ್ರಿಲ್: ೧೦, ೨೦೨೩ ರೊಳಗಾಗಿ ಸಲ್ಲಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ