
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2025-26 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯತಂತ್ರದ ಅಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 12 ಪ್ರಾಥಮಿಕ ಹಾಗೂ 16 ಪ್ರೌಢಶಾಲಾ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರ ಹುದ್ದೆಗಳನ್ನು ನೇರ ಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಜೂನ್, 13, 2026 ರ ಒಳಗಾಗಿ ಚಿಕ್ಕೋಡಿ ಜಿಲ್ಲೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಶೈಕ್ಷಣಿಕ ಹಾಗೂ ಉಪನಿರ್ದೇಶಕರು(ಆಡಳಿತ) ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು ಈ ಕಛೇರಿಯಿಂದ ಅರ್ಜಿ ಪಡೆದು, ಭರ್ತಿಮಾಡಿ, ಭರ್ತಿಮಾಡಿದ ಅರ್ಜಿಯನ್ನು ಸಂಬಂದಿಸಿದ ಎಲ್ಲಾ ದಾಖಲೆಗಳೊಂದಿಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಸಲ್ಲಿಸಬಹುದಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ : 9448999432 ಅಥವಾ ಕಛೇರಿಯ ಸೂಚನಾ ಫಲಕ ಹಾಗೂ ಕಛೇರಿಗೆ ಖುದ್ದಾಗಿ ಭೇಟಿಯಾಗಿ ಮಾಹಿತಿ ಪಡೆಯಬಹುದಾಗಿದೆ ಎಂದು ಚಿಕ್ಕೋಡಿ ಜಿಲ್ಲೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಶೈಕ್ಷಣಿಕ ಹಾಗೂ ಉಪನಿರ್ದೇಶಕರು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.