Belagavi NewsBelgaum NewsEducationKannada NewsKarnataka News

*ಮಿಲಿಟರಿ ಬಾಲಕರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸನ್ 2026-2027ನೇ ಶೈಕ್ಷಣಿಕ ವರ್ಷಕ್ಕೆ ಯುದ್ಧ ಸಂತ್ರಸ್ಥರು ಮತ್ತು ಮಾಜಿ ಸೈನಿಕರ ಮಕ್ಕಳಿಗೆ ನಗರದ ರೈಲು ನಿಲ್ದಾಣದ ಎದುರಿಗಿರುವ ಮಿಲಿಟರಿ ಬಾಲಕರ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಬೆಳಗಾವಿ ನಗರದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ ಪಿಯುಸಿ. ಡಿಪ್ಲೋಮಾ ಹಾಗೂ ಐಟಿಐದಲ್ಲಿ ವ್ಯಾಸಾಂಗಕ್ಕಾಗಿ ಪ್ರವೇಶವನ್ನು ಪಡೆದಿರಬೇಕು. ನಿಲಯದಲ್ಲಿ ಉಪಹಾರ, ಊಟ ಹಾಗೂ ವಸತಿ ಉಚಿತವಾಗಿರುತ್ತದೆ.

ಆಸಕ್ತ ಮಾಜಿ ಸೈನಿಕರು ಮತ್ತು ಯುದ್ಧ ಸಂತ್ರಸ್ಥರು ತಮ್ಮ ಮಕ್ಕಳ ವಸತಿ ನಿಲಯದ ಪ್ರವೇಶಕ್ಕೆ ಅರ್ಜಿ ನಮೂನೆಯನ್ನು ಬೆಳಗಾವಿಯ ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆ ಜಂಟಿ ನಿರ್ದೇಶಕರ ಕಾರ್ಯಾಲಯದಿಂದ ಉಚಿತವಾಗಿ ಪಡೆಯಬಹುದಾಗಿದೆ. ಏಪ್ರಿಲ್ 25, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರ ಕಾರ್ಯಾಲಯಕ್ಕೆ ವೈಯಕ್ತಿಕವಾಗಿ ಬೇಟಿ ನೀಡಿ ಅಥವಾ ನಿಲಯದ ಅಧೀಕ್ಷಕರ ಮೋಬೈಲ ಸಂಖ್ಯೆ 9449880818 ಯನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಅಥಣಿ ಮಿಲಿಟರಿ ಬಾಲಕರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

ಸನ್ 2026-2027ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಥಣಿ ಮಿಲಿಟರಿ ಬಾಲಕರ ವಸತಿ ನಿಲಯ ಪ್ರವೇಶಕ್ಕಾಗಿ ಯುದ್ಧ ಸಂತ್ರಸ್ಥರು ಮತ್ತು ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಅಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಅಥಣಿ ನಗರದ ಶೈಕ್ಷಣಿಕ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ ಪಿಯುಸಿ, ಡಿಪ್ಲೋಮಾ ಹಾಗೂ ಐಟಿಐದಲ್ಲಿ ವ್ಯಾಸಾಂಗಕ್ಕಾಗಿ ಪ್ರವೇಶವನ್ನು ಪಡೆದಿರಬೇಕು. ನಿಲಯದಲ್ಲಿ ಊಟ, ಉಪಹಾರ ಹಾಗೂ ವಸತಿ ಉಚಿತವಾಗಿರುತ್ತದೆ.

ಆಸಕ್ತ ಮಾಜಿ ಸೈನಿಕರು ಹಾಗೂ ಯುದ್ಧ ಸಂತ್ರಸ್ಥರು ತಮ್ಮ ಮಕ್ಕಳ ವಸತಿ ನಿಲಯದ ಪ್ರವೇಶಕ್ಕೆ ಅರ್ಜಿ ನಮೂನೆಯನ್ನು ಅಥಣಿ ಮಿಲಿಟರಿ ಬಾಲಕರ ವಸತಿ ನಿಲಯ ಅಧೀಕ್ಷರ ಕಾರ್ಯಾಲಯದಿಂದ ಉಚಿತವಾಗಿ ಪಡೆಯಬಹುದಾಗಿದೆ. ಏಪ್ರಿಲ್ 25, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರ ಕಾರ್ಯಾಲಯಕ್ಕೆ ವೈಯಕ್ತಿಕವಾಗಿ ಭೇಟಿಯಾಗಿ ಅಥವಾ ನಿಲಯದ ಅಧೀಕ್ಷಕರ ಮೋಬೈಲ ಸಂಖ್ಯೆ 9592139991 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button