Belagavi NewsBelgaum NewsElection NewsKannada NewsKarnataka NewsPolitics

ಕಾಂಗ್ರೆಸ್‌ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಯುವಕರು ಕೈ ಸೇರ್ಪಡೆ: ಸಚಿವ ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಕಾಂಗ್ರೆಸ್‌ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಹುಕ್ಕೇರಿಯ ಹಲವಾರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು,  ಬಿಜೆಪಿಯ ಆಡಳಿತದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ವರದಾನವಾಗಿ ಪರಿಣಮಿಸಿವೆ. ಇಂದು  ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ರಾಜ್ಯಾದ್ಯಂತ ಆಗುತ್ತಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಯುವಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ. ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದರೆ ಮುಂದೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ಇರುವದರಿಂದ ಹೆಚ್ಚೆಚ್ಚು ಅನುದಾನ ತರಲಾಗಿದೆ. ಸುಮಾರು 15 ವರ್ಷಗಳಲ್ಲಿ  ಕ್ಷೇತ್ರಕ್ಕೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿ ಸೇರಿದಂತೆ  ಶಾಲೆಗಳನ್ನ ಪ್ರಾರಂಭ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಗ್ರಾಮಸ್ಥರು ನಮ್ಮ ಪಕ್ಷಕ್ಕೆ ಆಶಿರ್ವಾದ ಮಾಡಿ ಹಳ್ಳಿಗಳ ಇನಷ್ಟು ಅಭಿವೃದ್ಧಿಯಾಗಲು ಸಹಕರಿಸಬೇಕು ಎಂದು ಹೇಳಿದರು.


ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ಇರುವದರಿಂದ ಹೆಚ್ಚೆಚ್ಚು ಅನುದಾನ ತರಲಾಗಿದೆ. ಸುಮಾರು 15 ವರ್ಷಗಳಲ್ಲಿ  ಕ್ಷೇತ್ರಕ್ಕೆ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಕಾಮಗಾರಿ ಸೇರಿದಂತೆ  ಶಾಲೆಗಳನ್ನ ಪ್ರಾರಂಭ ಮಾಡುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಗ್ರಾಮಸ್ಥರು ನಮ್ಮ ಪಕ್ಷಕ್ಕೆ ಆಶಿರ್ವಾದ ಮಾಡಿ ಹಳ್ಳಿಗಳ ಇನಷ್ಟು ಅಭಿವೃದ್ಧಿಯಾಗಲು ಸಹಕರಿಸಬೇಕು. ಎಂದು ಹೇಳಿದರು.


ಇದೇ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ಸಮ್ಮುಖದಲ್ಲಿ ಇಮಾಮಹುಸೇನ್‌  ನದಾಫ್‌ ಅವರ ನೇತೃತ್ವದಲ್ಲಿ  ಈರ್ಫಾನ್‌ ಬಾಗವಾನ್‌,  ಶಬ್ಬಿರ ಬಾಗವಾನ್‌,  ಆಶ್ಪಾಕ್‌ ಬಾಗವಾನ್‌, ಮುನ್ನಾ  ಮಲ್ಲಾಪುರ,  ಮುಬಾರಕ ಬಾಗವಾನ್‌,  ರಫೀಕ್‌ ನದಾಫ್‌,  ಮಾರುತಿ ಕುದರಿ,  ಸುರೇಶ ಶಿಂಧೆ,  ವಿಠ್ಠಲ್‌ ಮರಡಿ, ಚಂದ್ರಪ್ಪ ಕೊರವರ, ಭಿಮವ್ವಾ ಭಂಜತ್ರಿ, ಕಾನವ್ವಾ ಸುಸಿಲಾ, ಯಲ್ಲವ್ವಾ, ಮಹಾದೇವಿ ಸೇರಿದಂತೆ ಅನೇಕ ಮಹಿಳೆಯರು ಕಾಂಗ್ರೆಸ್‌  ಸೇರ್ಪಡೆಯಾದರು.

ಇದೇ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ನೂರಾರು ಯುವಕರಿಗೆ ಸಚಿವ ಸತೀಶ್‌ ಜಾರಕಿಹೊಳಿ ಸನ್ಮಾನಿಸಿದರು. ಇದೇ ವೇಳೆ ಗ್ರಾಮದ ಮುಖಂಡರು ಹಾಗೂ ಪಕ್ಷದ ಹಿರಿಯ ಮುಖಂಡರು ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಹೂಗುಚ್ಚ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮದ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button