Kannada NewsKarnataka News

​ಅಭೂತಪೂರ್ವ ಬಜೆಟ್ -ಶಂಕರಗೌಡ ಪಾಟೀಲ​

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೃಷಿ ಆಧಾರಿತ ವಲಯಕ್ಕೆ 2 . 83 ಲಕ್ಷ ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ  ಅಭೂತಪೂರ್ವ,   ಐತಿಹಾಸಿಕ ಬಜೆಟ್ ಮಂಡಿಸಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ, ಭಾರತೀಯ ಜನತಾಪಾರ್ಟಿಯ ರೈತ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಶಂಕರಗೌಡ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
 ರೈತ ಮಹಿಳೆ ಉತ್ತೇಜನಕ್ಕಾಗಿ ಧಾನ್ಯಲಕ್ಷ್ಮಿ ಯೋಜನೆ ಆರಂಭ, ಕೃಷಿ ಸಾಲಕ್ಕಾಗಿ ನಬಾರ್ಡ ಯೋಜನೆಗೆ 15 ಲಕ್ಷ ಕೋಟಿ ಅನುದಾನ ಮತ್ತು ಮೀನುಗಾರರಿಗೆ ಸಾಗರ ಮಿತ್ರ ಯೋಜನೆಯಡಿಯಲ್ಲಿ ಮೀನುಗಾರ ಉತ್ಪಾದಕರ ಸಂಘ ಸ್ಥಾಪನೆ ಮತ್ತು ಮತ್ಸ್ಯ ಉದ್ಯಮಕ್ಕೆ ಉತ್ತೇಜನ ನೀಡಿರುವುದಲ್ಲದೆ ನೌಕರ ವರ್ಗದವರಿಗೆ ವಾರ್ಷಿಕ 5 ಲಕ್ಷವರೆಗೆ  ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರ ಎಲ್ಲಾ ವರ್ಗದವರಿಗೂ ಈ ಬಜೆಟ್ ಪೂರಕ ಮತ್ತು ಉತ್ತಮ ಬಜೆಟ್ ನೀಡಿದೆ ಎಂದು ಅವರು ಪ್ರಶಂಸಿಸಿದ್ದಾರೆ.

Related Articles

Back to top button