Kannada NewsKarnataka NewsLatest

ಅಭಿವೃದ್ಧಿ ಸಿಂಹಾವಲೋಕನಕ್ಕೆ ಅರಿಷಿಣ ಕುಂಕುಮ ಕಾರ್ಯಕ್ರಮ ಸಹಾಯಕ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಪ್ರತಿ ಗ್ರಾಮದಲ್ಲೂ ಪ್ರತಿಯೊಬ್ಬರ ಜೊತೆ ಬಾಂಧವ್ಯ ಬೆಸೆಯುವ ಮೂಲಕ ಅರಿಷಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತಿದ್ದು, ನಾಲ್ಕೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿಯ ಕೆಲಸಗಳ ಬಗ್ಗೆ ಮೆಲುಕು ಹಾಕುತ್ತಿದ್ದೇನೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಕೆ ಕೆ ಕೊಪ್ಪ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಅರಿಷಿಣ-ಕುಂಕುಮ ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿದರು.

“ಹಣ ಮಂಜೂರಿ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಮತ್ತೆ ಅತ್ತ ತಿರುಗಿ ನೋಡದಿರುವುದು ಒಬ್ಬ ಜನಪ್ರತಿನಿಧಿಯ ಲಕ್ಷಣವಲ್ಲ. ನಾವೇನೇ ಮಾಡಿದ್ದರೂ ಅದರ ಸಿಂಹಾವಲೋಕನ ಮಾಡಿದಾಗ ಮಾತ್ರ ನಾವು ಮಾಡಿದ್ದರ ಬಗ್ಗೆ ಹೆಮ್ಮೆ ಪಡಬಹುದು. ಈ ನಿಟ್ಟಿನಲ್ಲಿ ನಾಲ್ಕುವರೆ ವರ್ಷಗಳಲ್ಲಿ ನನ್ನ ಕನಸಿನ ಜನಸೇವೆ, ಅದು ಜನತೆಗೆ ತಲುಪಿದೆಯೋ, ಇಲ್ಲವೋ ಎಂಬ ಅವಲೋಕನಕ್ಕೆ ಈ ಅರಿಷಿಣ ಕುಂಕುಮ ಕಾರ್ಯಕ್ರಮ ಪೂರಕವಾಗಿದೆ. ಇದರೊಂದಿಗೆ ಜನಾಭಿಪ್ರಾಯ ಸಂಗ್ರಹಿಸಿ ಜನತೆಯ ಆಶೋತ್ತರಗಳನ್ನು ಅರ್ಥ ಮಾಡಿಕೊಂಡು ಇನ್ನೂ ಹೆಚ್ಚು ಸೇವೆ, ಅಭಿವೃದ್ಧಿಗೆ ಕಣಕಣಬದ್ಧಳಾಗುತ್ತಿದ್ದೇನೆ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಿ.ಸಿ. ಪಾಟೀಲ, ಸುರೇಶ ಇಟಗಿ, ಗಿರಿಜಾ ಬಾನಿ, ಭಾರತಿ ಹಿರೇಮಠ, ರಾಮನಗೌಡ ಪಾಟೀಲ, ಸಂತೋಷ ಕಂಬಿ, ಚಂಬಯ್ಯ ಹಿರೇಮಠ, ಗಂಗಪ್ಪ ಮಾಸ್ತಮರ್ಡಿ, ಬಸವರಾಜ ತೋಲಗಿ, ಸಿದ್ದರಾಯಿ ವಾಲಿ, ಅಪ್ಪುರಾಯ ನಂದಿ, ಈರಣ್ಣ ಚಿನ್ನಣ್ಣವರ, ಶಿವು ಕಂಬಿ, ಅಯ್ಯಪ್ಪ ಮಾವಿನಕಟ್ಟಿ, ಭೀಮು ಬಾನಿ, ಜಯಪ್ರಕಾಶ ನಾವಲಗಿ, ಮಂಜು ನಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

https://pragati.taskdun.com/azank-s-eshwarappamangalore/

https://pragati.taskdun.com/a-new-opportunity-for-summer-travel-low-cost-india-nepal-astha-yatra-will-start-from-march-31/
https://pragati.taskdun.com/union-minister-smriti-irani-to-belgaum-on-march-16-shiva-charitra-inauguration-ceremony/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button