Kannada NewsPoliticsWorld

*ಬಾಂಬ್ ದಾಳಿಗೆ ರಷ್ಯಾ ಸೇನೆಯ ಲೆಫ್ಟಿನೆಂಟ್ ಜನರಲ್ ಬಲಿ*

ಪ್ರಗತಿವಾಹಿನಿ ಸುದ್ದಿ: ರಷ್ಯಾದ ಲೆಫ್ಟಿನೆಂಟ್ ಜನರಲ್ ಫನಿಲ್ ಸರ್ವರೋವ್ ಅವರು ಸೋಮವಾರ ಮಾಸ್ಕೋದಲ್ಲಿ ತಮ್ಮ ಕಾರಿನ ಕೆಳಗೆ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ದುರ್ಮರಣಕ್ಕಿಡಾಗಿದ್ದಾರೆ ಎಂದು ತನಿಖಾಧಿಕಾರಿಗಳ ತಿಳಿಸಿದ್ದಾರೆ.

ಸ್ಫೋಟದ ಬೆನ್ನಲ್ಲೇ ಪ್ರಮುಖ ಅಪರಾಧಗಳ ವಿಚಾರಣೆ ನಡೆಸುವ ರಷ್ಯಾದ ಉನ್ನತ ಮಟ್ಟದ ಸಮಿತಿ ತನಿಖೆಗಿಳಿದಿದೆ. ಈ ದಾಳಿಯ ಹಿಂದೆ ಉಕ್ರೇನಿಯನ್ ವಿಶೇಷ ಪಡೆಗಳ ಕೈವಾಡವಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇದೇ ರೀತಿಯ ಘಟನೆಯಲ್ಲಿ, ಏಪ್ರಿಲ್‌ನಲ್ಲಿ ಮಾಸ್ಕೋ ಬಳಿ ನಡೆದ ಕಾರು ಸ್ಫೋಟದಲ್ಲಿ ಜನರಲ್ ಸ್ಟಾಫ್‌ನ ಡೆಪ್ಯೂಟಿ ಜನರಲ್ ಯಾರೋಸ್ಲಾವ್ ಮೊಸ್ಕಲಿಕ್ ಸಹ ಕೊಲ್ಲಲ್ಪಟ್ಟಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button