ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಆರೋಪಿಯನ್ನು ಬಂಧಿಸಿರುವ ಟಿಳಕವಾಡಿ ಠಾಣೆ ಪೊಲೀಸರು 9 ಲಕ್ಷ ರೂ. ಮೌಲ್ಯದ 11 ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.
ಖಡೇಬಜಾರ ಉಪವಿಭಾಗ ಎಸಿಪಿ ಚಂದ್ರಪ್ಪ ಹಾಗೂ ಪಿಐ ಟಿಳಕವಾಡಿ ರಾಘವೇಂದ್ರ ಹವಾಲದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಮಕಬುಲ ಅಹ್ಮದ @ಅಸ್ಲಂ. ತಂದೆ ಮೆಹಬೂಸಾಬ ಬಿಕ್ಕನಬಾಯಿ (೨೭) (ಸಾ|| ಬೀರಬಲ್ ಓಣಿ ಹುಬ್ಬಳ್ಳಿ ಹಾಲಿ: ಹಾಲಿ ಹಳೆ ಹುಬ್ಬಳ್ಳಿ) ಈತನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 9 ಲಕ್ಷ ರೂ. ಮೌಲ್ಯದ 11 ವಿವಿಧ ಕಂಪನಿಯ ಮೋಟರ್ ವಾಹನಗಳನ್ನು ವಶಕ್ಕೆ ಪಡೆದುಕೊಂಡು ತಿಳಕವಾಡಿ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ದ್ವಿಚಕ್ರ ವಾಹನ ಕಳ್ಳನನ್ನ ಪತ್ತೆ ಮಾಡುವಲ್ಲಿ ಶ್ರಮಿಸಿದ ತಿಳಕವಾಡಿ ಠಾಣೆಯ ಸಿಬ್ಬಂದಿಯನ್ನು ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.
ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಕಳಕಳಿ: ದಸರಾ ವೈಭವಕ್ಕೆ ವೇದಿಕೆಯಾದ ರೈಲು ನಿಲ್ದಾಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ