ಕಾರು ಕಳುವು ಮಾಡಿ ಮಾರುತ್ತಿದ್ದ ಆರೋಪಿಗಳ ಬಂಧನ; MSRTC ಮಾಜಿ ಗುಮಾಸ್ತ ಗುಪ್ತ ದಂಧೆಯ ಕಿಂಗ್ ಪಿನ್ !
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ಕಾರು ಖರೀದಿಸಿ ಮಾರಾಟ ಮಾಡಿ, ಅದೇ ಕಾರನ್ನು ಕಳ್ಳತನ ಮಾಡಿ ಮತ್ತೆ ಮಾರಾಟ ಮಾಡುತ್ತಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಕಿಂಗ್ ಪಿನ್ ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿಯಾಗಿದ್ದು ಗಡಹಿಂಗ್ಲಜ್ ನಲ್ಲಿ ಮಹಾರಾಷ್ಟ್ರರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ.
ನಂತರದಲ್ಲಿ ಕೆಲಸ ಕಳೆದುಕೊಂಡಿದ್ದ ಈತ ಹಳೆಯ ಕಾರುಗಳನ್ನು ಕೊಳ್ಳುವಿಕೆ ವ್ಯವಹಾರ ಪ್ರಾರಂಭಿಸಿದ್ದ. ಬೇರೆಯವರ ಕಾರುಗಳನ್ನು ತಾನು ನಡೆಸುವುದಾಗಿ ಹೇಳಿ ಅವುಗಳನ್ನು ಪಡೆದ ನಂತರ ನಂಬರ್ ಪ್ಲೇಟ್ ಗಳನ್ನು ಬದಲಾಯಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ.
ನಂತರದಲ್ಲಿ ಕಾರು ಎಲ್ಲಿದೆ ಎಂಬುದನ್ನು ಜಿಪಿಎಸ್ ಮೂಲಕ ಪತ್ತೆ ಹಚ್ಚಿ ಗಡ ಹಿಂಗ್ಲಜ್ ನ ತನ್ನ ಮೂವರು ಸಹಚರರಿಗೆ ಅದು ಇರುವ ಸ್ಥಳ ತಿಳಿಸಿ ಕಳ್ಳತನ ಮಾಡಿಸಿ ಅದೇ ಕಾರನ್ನು ಮತ್ತೆ ಬೇರೆಯವರಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದ.
2022ರ ಜುಲೈನಲ್ಲಿ ಹುಕ್ಕೇರಿ ತಾಲೂಕಿನ ಹಂಜ್ಯಾನಟ್ಟಿ ಗ್ರಾಮದಲ್ಲಿ ಟೊಯೊಟಾ ಕಂಪನಿಯ ಇಟಿಯೋಸ್ ಲಿವಾ ಕಾರನ್ನು ಇದೇ ರೀತಿ ಕಳುವು ಮಾಡಿಸಿದ್ದ. ಈ ಕುರಿತು ಕಾರಿನ ಮಾಲೀಕರು ದೂರು ದಾಖಲಿಸಿದ್ದರು.
ಪ್ರಕರಣದ ಬೆನ್ನು ಬಿದ್ದ ಹುಕ್ಕೇರಿ ಪೊಲೀಸರು, ಆರೋಪಿಯನ್ನು ಬಂಧಿಸಿ ಕಳುವು ಮಾಡಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆ ಪಿಐ ಅವರ ನೇತೃತ್ವದ ತಂಡ ಮಹಾರಾಷ್ಟ್ರ ರಾಜ್ಯದ ಗಡಹಿಂಗ್ಲಜ್, ಕೊಲ್ಲಾಪುರ, ಪುಣೆ, ನಾಸಿಕ್, ಔರಂಗಾಬಾದ್ ಹಾಗೂ ಪಂಢರಾಪುರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿತರು, ಕಳುವಾದ ಕಾರು ಹಾಗೂ ಕಳುವಿಗೆ ಬಳಸಿದ ಮೋಟರ್ ಬೈಕ್ ಒಂದನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ಡಿಎಸ್ಪಿ ಮನೋಜಕುಮಾರ್ ನಾಯಕ, ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಎಂ. ತಹಶೀಲ್ದಾರ್, ಎಎಸ್ಐ ಎ.ಎಸ್.ಸನದಿ, ಸಿಬ್ಬಂದಿಗಳಾದ ಸಿ.ಡಿ. ಪಾಟೀಲ, ಆರ್.ಎಸ್.ಡಂಗ, ಗಜಾನನ ಎಸ್. ಕಾಂಬಳೆ, ಮಂಜುನಾಥ ಎಸ್. ಕಬ್ಬೂರ, ಎಸ್.ಆರ್.ರಾಮದುರ್ಗ, ಎ.ಎಲ್. ನಾಯಕ, ಯು.ವೈ. ಅರಬಾವಿ, ಬಿ.ವಿ. ನಾವಿ, ಬಿ.ಆರ್. ಶಿರಗಾವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
*3 ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ*
https://pragati.taskdun.com/election-commission-of-india-announceassembly-electionstripuranagalandmeghalaya/
ಅತ್ಯಾಚಾರ ಸಂತ್ರಸ್ತೆಯನ್ನೇ ವರಿಸಿದ ಆರೋಪಿ; ಹೈಕೋರ್ಟ್‌ನಿಂದ ಪ್ರಕರಣ ರದ್ದು
https://pragati.taskdun.com/accused-marries-rape-victim-the-case-was-quashed-by-the-high-court/
*ಕೆಯುಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಗಳು ಪ್ರಕಟ*
https://pragati.taskdun.com/kuwjawardannounce/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ