Kannada NewsKarnataka News

ಕ್ಯಾಂಪ್ ಪೊಲೀಸ್‌ರಿಂದ ಮನೆಗಳ್ಳನ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎರಡು ಮನೆಗಳಿಂದ ಸುಮಾರು 4 ಲಕ್ಷ ರೂ. ಮೌಲ್ಯ ಆಭರಣ ಹಾಗೂ ನಗದನ್ನು ಕದ್ದಿದ್ದ 19 ವರ್ಷದ ಯುವಕನನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ -೨೦೧೯ ನೇ ತಿಂಗಳಲ್ಲಿ  ಸಂಗೀತಾ ಸಯ್ಯಾಜಿ ಪಾಟೀಲ (ಸಾ: ನಕ್ಷತ್ರ ಕಾಲೋನಿ, ವಿನಾಯಕ ನಗರ, ಬೆಳಗಾವಿ) ಇವರ ಮನೆಯಲ್ಲಿ ಬಾಗಿಲ ಮುರಿದು  ಕಳ್ಳರು ಅಲ್ಮೇರಾದಲ್ಲಿಯ ಬಂಗಾರ ಹಾಗೂ ಬೆಳ್ಳಿಯ ಆಭರಣ ಮತ್ತು ಒಟ್ಟು ರೂ.೧,೦೫,೬೦೦ ಕಳ್ಳತನ ಮಾಡಿದ್ದರು.

ಡಿಸೆಂಬರ್ ೩೦ -೨೦೧೯ ರಂದು  ಸಂಗೀತಾ ನಾಮದೇವ ಬಿರ್ಜೆ (ಸಾ: ದತ್ತ ಕಾಲೋನಿ, ವಿಜಯನಗರ, ಹಿಂಡಲಗಾ ಬೆಳಗಾವಿ) ಅವರ ಮನೆಯಲ್ಲೂ ಸಹ ಇದೇ ರೀತಿ ಬಾಗಿಲ  ಕೊಂಡಿಯನ್ನು ಮುರಿದು  ಕಳ್ಳರು ಅಲ್ಮೇರಾದಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣ ಹಾಗೂ  ಹಣ ಒಟ್ಟು ರೂ. ೧,೫೩,೦೦೦ ಕಿಮ್ಮತ್ತಿನವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ಈ ಬಗ್ಗೆ ಪ್ರತ್ಯೇಕ ದೂರುಗಳು ಕ್ಯಾಂಪ್ ಠಾಣೆಯಲ್ಲಿ ದಾಖಲಾಗಿತ್ತು.

Home add -Advt

ಪ್ರಕರಣಗಳ ಪತ್ತೆಗೆ ಬಲೆ ಬೀಸಿದ ಕ್ಯಾಂಪ್ ಠಾಣೆ ಪಿಐ ಹಾಗೂ ಅವರ ತಂಡಕ್ಕೆ ದೊರೆತ ಮಾಹಿತಿಯಂತೆ ಎಸಿಪಿ  ಎ. ಚಂದ್ರಪ್ಪ  ಮಾರ್ಗದರ್ಶನದಲ್ಲಿ  ಡಿ ಸಂತೋಷಕುಮಾರ ಪಿಐ ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ತಂಡದ ಬಿ.ಆರ್. ಡೂಗ್, ಎಎಸ್‌ಐ,  ಬಿ ಬಿ ಗೌಡರ, ಎಂ ಎ ಪಾಟೀಲ,, ಬಿ. ಎಮ್. ನರಗುಂದ,  ಬಿ. ಎಸ್. ರುದ್ರಾಪೂರ, ಎ. ಬಿ. ಘಟ್ಟದ,  ಯು ಎಂ ಥೈಕಾರ,  ಎಸ್ ಎಚ್ ತಳವಾರ ತನಿಖೆ ನಡೆಸಿದ್ದರು.

ಸಂಶಯುಕ್ತ ಆರೋಪಿ ರಾಜು ಯಲ್ಲಪ್ಪ ಆಲಟ್ಟಿ (೧೯ ವರ್ಷ) (ಸಾ: ಮನೆ ನಂ: ೬೯ ವಂಟಮುರಿ ಕಾಲೋನಿ, ಬೆಳಗಾವಿ) ಎನ್ನುವವನನ್ನು ಬಂಧಿಸಿ ಕೂಲಂಕಷವಾಗಿ ವಿಚಾರಣೆಗೊಳಪಡಿಸಿದಾಗ  ಎರಡೂ ಮನೆಗಳಲ್ಲಿ ತಾನೇ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡು ಕಳ್ಳತನ ಮಾಡಿದ ರೂ.೪ ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ತೋರಿಸಿದ. ಅವುಗಳನ್ನು ಜಪ್ತ ಪಡಿಸಿಕೊಂಡು ಆತನ ವಿರುದ್ದ  ಕಾನೂನು ಕ್ರಮ ಜರುಗಿಸಲಾಗಿದೆ.

Related Articles

Back to top button