
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪತ್ನಿ ಕೊಂದು ಪಲಾಯನಗೈದಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ: ೧೧.೦೬.೨೦೨೩ ರಂದು ಬೆಳಗಾವಿ ನಗರ ಶಹಾಪೂರ ವ್ಯಾಪ್ತಿಯ ಹಳೆ ಬೆಳಗಾವಿ ಗಣೇಶ ಪೇಠ ಗಲ್ಲಿಯಲ್ಲಿ ಪ್ರಮೋದಿನಿ ಸೋಮನಾಚೆ (೪೫) ಇವರ ಗಂಡ ಸಂಪತ್ ಶಂಕರ ಸೋಮನಾಚೆ ಇವನು ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದು, ಗಾಯಾಳು ಪ್ರಮೋದಿನಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ ರಾತ್ರಿ ಸುಮಾರು ೧೧ ಗಂಟೆಗೆ ಉಪಚಾರ ಫಲಿಸದೇ ಮೃತಳಾಗಿದ್ದು, ಈ ವಿಚಾರವಾಗಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಸಿಪಿ ಮಾರ್ಕೆಟ್ ಉಪ-ವಿಭಾಗ ಬೆಳಗಾವಿ ನಗರ ರವರ ಮೇಲ್ವಿಚಾರಣೆಯಲ್ಲಿ ಶ್ರೀನಿವಾಸ ಹಾಂಡ ಪಿಐ (ಪ್ರಭಾರ) ಶಹಾಪೂರ ಪೊಲೀಸ್ ಠಾಣೆ ರವರ ನೇತೃತ್ವದ ಸಿಬ್ಬಂದಿ ತನಿಖಾ ತಂಡವು ಆರೋಪಿ ಸಂಪತ್ ಶಂಕರ ಸೋಮನಾಚೆ (೪೭)ಯನ್ನು ಬಂಧಿಸಿ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.
ಕೊಲೆ ಮಾಡಿದ ಆರೋಪಿತನನ್ನ ೨೪ ಗಂಟೆಯೊಳಗಾಗಿ ಪತ್ತೆ ಮಾಡಿ ಬಂಧಿಸುವಲ್ಲಿ ಎಸಿಪಿ ಮಾರ್ಕೆಟ್, ಪಿಐ ಶಹಾಪೂರ ಮತ್ತು ಸಿಬ್ಬಂದಿ ತಂಡವನ್ನು ಪೊಲೀಸ್ ಆಯುಕ್ತರು, ಡಿಸಿಪಿ ರವರುಗಳು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ