Karnataka News

*ಸ್ನೇಹಿತರ ಪಟಾಕಿ ಹುಚ್ಚಾಟಕ್ಕೆ ಯುವಕ ಸಾವು: 6 ಜನರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದಂದು ಸ್ನೇಹಿತರ ಪಟಾಕಿ ಸಿಡಿಸುವ ಹುಚ್ಚಾಟಕ್ಕೆ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಶಬರೀಶ ಮೃತ ಯುವಕ. ಕೋಣನಕುಂಟೆ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ಸ್ನೇಹಿತರೆಲ್ಲ ಸೇರಿ ಕುಡಿದ ಅಮಲಿನಲ್ಲಿ ಪಟಾಕಿ ಹಚ್ಚುವ ಹುಚ್ಚಾಟ ನಡೆಸಿದ್ದರು. ಪಟಾಕಿಗಳನ್ನಿಟ್ಟು ಅದರ ಮೇಲೆ ಡಬ್ಬಿ ಇಟ್ಟು ಆ ಡಬ್ಬಿ ಮೇಲೆ ಕುಳಿತುಕೊಳ್ಳುವಂತೆ ಶಬರೀಶನಿಗೆ ಸವಾಲು ಹಾಕಿದ್ದರು. ಕುಡಿದ ಅಮಲಿನಲ್ಲಿದ್ದ ಶಬರೀಶ ತಾನು ಡಬ್ಬಿ ಮೇಲೆ ಪಟಾಕಿ ಸಿಡಿಯುವವರೆಗೂ ಕುಳಿತುಕೊಳ್ಳುತ್ತೇನೆ. ಕುಳಿತರೆ ಆಟೋ ರಿಕ್ಷಾ ಕೊಡಿಸಬೇಕು ಎಂದಿದ್ದ.

ಅದರಂತೆ ಪಟಾಕಿ ಇಟ್ಟು, ಅದರ ಮೇಲೆ ಡಬ್ಬಿ ಇಟ್ಟು, ಅದರ ಮೇಲೆ ಶಬರೀಶನನ್ನು ಕೂರಿಸಿ ಪಟಾಕಿಗೆ ಬೆಂಕಿ ಹಚ್ಚಿದ್ದರು. ಪಟಾಕಿ ಸಿಡಿದ ಹೊಡೆತಕ್ಕೆ ಶಬರೀಶನ ಖಾಸಗಿ ಅಂಗಕ್ಕೆ ತೀವ್ರವಾದ ಸುಟ್ಟ ಗಾಯಗಳಾಗಿತ್ತು. ತಕ್ಷಣ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.

ಘಟನೆ ಸಂಬಂಧ ಕೋಣನಕುಂತೆ ಪೊಲೀಸರು ಆರೋಪಿಗಳಾದ ನವಿನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬುವವರನ್ನು ಬಂಧಿಸಿದ್ದಾರೆ.

Home add -Advt


Related Articles

Back to top button