ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದ 6 ಜನರನ್ನು ಬಂಧಿಸಿದ್ದಾರೆ. ಅವರಿಂದ 2.75 ಲಕ್ಷ ರೂ. ಮೌಲ್ಯದ 11 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನ್ಯೂ ಗಾಂಧಿನಗರದ ಅಬ್ದುಲ್ ಪರಶುರಾಮ ಕೋಳಿ ಹಾಗೂ ಜಮೀರ್ ಸೈಫುದ್ದೀನ್, ಆಜಾದ್ ನಗರದ ಅಜೀಮ್ ರಜಾಕ್ ಮುಲ್ಲಾ, ಬೀಡಿಯ ರಿಜ್ವಾನ್ ರಫೀಕ್ ಮಹಾತ್, ವಾಸಿಮ್ ಇಮ್ತಿಯಾಜ್ ಶಮಶೇರ್ ಹಾಗೂ ಮಹಮ್ಮದ್ ಯುನೂಸ್ ಗೋರೆ ಸಾಬ್ ತಾನಶೆವಾಲೆ ಬಂಧಿತರು.
ಇವರು ಬೆಳಗಾವಿ, ಖಾನಾಪುರ, ಬೀಡಿ ಸುತ್ತಮುತ್ತ ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದರು.
ರಿಜ್ವಾನ್, ವಾಸಿಮ್, ಮಹ್ಮದ್ ಇವರು ಖಾನಾಪುರ, ಬೀಡಿ ಭಾಗದಲ್ಲಿ 50ಕ್ಕಿಂತ ಹೆಚ್ಚು ಬೈಕ್ ಗಳನ್ನು ಕದ್ದು ಬೆಳಗಾವಿಗೆ ತಂದು ಜಮೀರ್ ಎನ್ನುವ ಮೇಸ್ತ್ರಿಯಿಂದ ಅದನ್ನು ಸ್ಕ್ರ್ಯಾಪ್ ಮಾಡಿಸಿ, ಅಜೀಂ ಎನ್ನುವವನಿಗೆ ಮಾರಿದ್ದಾರೆ.
ಮಾರ್ಕೆಟ್ ಎಸಿಪಿ ಎನ್.ವಿ.ಬರಮನಿ ಹಾಗೂ ಮಾಳಮಾರುತಿ ಇನಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಮಾಳಮಾರುತಿ ಠಾಣೆಯ ಪಿಎಸ್ಐಗಳಾದ ಆರ್.ಬಿ.ಸೌದಾಗರ್, ಹೊನ್ನಪ್ಪ ತಳವಾರ್, ಎಎಸ್ಐ ಎ.ಆರ್.ದುಂಡಗಿ, ಎಂ.ಜೆ.ಕುರೇರ, ಡಿ.ಸಿ.ಸಾಗರ, ಕೆ.ಡಿ.ನದಾಫ್, ಎಲ್.ಎಂ.ಮುಶಾಪುರೆ, ಎಸ್.ಎಂ.ಗುಡದೈಗೋಳ, ಮಂಜುನಾಥ ಮೇಲಸರ್ಜ, ಎಂ.ಬಿ.ಅಡವಿ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ