ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ವಿಭಾಗ ವತಿಯಿಂದ ಆಶಾ ಕಾರ್ಯಕತೆಯರಿಗೆ ಧನ್ಯವಾದ ಅರ್ಪಣೆ ಕಾರ್ಯಕ್ರಮವನ್ನು ಬೆಳಗಾವಿ ತಾಲೂಕಿನ ಪಂತನಗರದ ಶಿವಾಲಯ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಭೆಂಡಿಗೇರಿ ಹಾಗೂ ಶ್ರೀ ಸಿದ್ಧಿವಿನಾಯಕ ಸಾಂಸ್ಕ್ರತಿಕ ಭವನ, ಹಿಂಡಲಗಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಯಿತು.
ಆರ್.ಎಸ್.ಎಸ್ ಸಹಪ್ರಾಂತ ಪ್ರಚಾರಕ ನರೇಂದ್ರ, ಹಾಗೂ ಆರ್.ಎಸ್.ಎಸ್. ವಿಭಾಗ ಕಾರ್ಯವಾಹ ಕೃಷ್ಣಾನಂದ ಕಾಮತ ಇವರು ಪಂತನಗರದಲ್ಲಿ ಹಾಗೂ ಸಂಘದ ಪ್ರಮುಖರಾದ ಕೃಷ್ಣ ಭಟ್ ಮತ್ತು ಅಶೋಕ ಶಿಂತ್ರೆ ಇವರು ಭೆಂಡಿಗೇರಿಯಲ್ಲಿ ಆರ್.ಎಸ್.ಎಸ್ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಇವರು ಹಿಂಡಲಗಾ ಗ್ರಾಮದಲ್ಲಿ ಪಾಲ್ಗೊಂಡಿದ್ದರು.
ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ, ಅಭಯ ಅವಲಕ್ಕಿಸಹ ಭಾಗವಹಿಸಿ ಆಶಾ ಕಾರ್ಯಕರ್ತೆಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಕೊಡೆಗಳನ್ನು ಆಶಾಕಾರ್ಯಕರ್ತೆಯರಿಗೆ ನೀಡಲಾಯಿತು. ಪ್ರಧಾನ ಮಂತ್ರಿಗಳು ಆಶಾಕಾರ್ಯಕರ್ತೆಯರನ್ನೂ ಕೂಡ ಕೋವಿಡ್ ವಾರಿಯರ‍್ಸ್ ಎಂದು ಕರೆದಿದ್ದು, ಆಶಾ ಕಾರ್ಯಕರ್ತೆಯರು ಈ ಕೋವಿಡ್ ಮಹಾಮಾರಿಯನ್ನು ತಡೆಗಟ್ಟುವ ಹೋರಾಟದಲ್ಲಿ ತಮ್ಮ ಜೀವದ ಹಂಗು ತೊರೆದು ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿ ಮಹಾಮಾರಿ ಕರೋನಾ (ಕೋವಿಡ್-೧೯) ಶಂಕಿತರ ಸಂಖ್ಯೆ ಯನ್ನು ಹಿಡಿತದಲ್ಲಿಡಲು ಇವರು ಗಣನೀಯ ಸೇವೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿಯೂ ಕೂಡ ಇವರ ಸೇವೆಯನ್ನು ನೆನಪಿನಲ್ಲಿಡುವಂತಾಗಿದೆ. ಇವರ ಈ ಸೇವೆಗೆ ಎಷ್ಟೇ ಧನ್ಯವಾದಗಳನ್ನು ಅರ್ಪಿಸಿದರೂ ಕೂಡ ಕಡಿಮೆ ಎಂದು ಕಾರ್ಯಕರ್ತೆಯರ ಸೇವೆಯನ್ನು ಪ್ರಶಂಸಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ