
https://youtu.be/bW7HNprTtTw?si=cirqW9hiH6qwpgPh
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 10 ಸಾವಿರ ಗೌರವ ಧನ ಹೆಚ್ಚಿಸಬೇಕು, 60 ವರ್ಷಕ್ಕೆ ಸೇವಾ ನಿವೃತ್ತಿ ನೀಡಬಾರದು ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಇಂದು ಬೆಳಗಾವಿ ನಗರದ ಸರ್ದಾರ ಮೈದಾನದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುವ ಮೂಲಕ ಜಿಲ್ಲಾಧಿಕಾರಿ ಮೋಹಮ್ಮದ ರೋಷನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಳೆದ ತಿಂಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗ 10 ಸಾವಿರ ಗೌರವ ಧನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೇ, ಈಗ ಸಿಎಂ ಅದನ್ನು ನೀಡುತ್ತಿಲ್ಲ. ಕೂಡಲೇ 10 ಸಾವಿರ ಗೌರವಧನ ನೀಡಬೇಕು. ಅಲ್ಲದೇ 60 ವರ್ಷಕ್ಕೆ ಸೇವಾ ನಿವೃತ್ತಿ ನೀಡಬಾರದು ಎಂದರು ಎಐಟಿಯುಸಿ ಕಾರ್ಯದರ್ಶಿ ಗೀತಾ ರಾಯಗೋಳ ಆಗ್ರಹಿಸಿದರು.
ಇನ್ನು ಬಜೆಟ್ ಪೂರ್ವಸಭೆಯನ್ನು ಕರೆದು, ಆಶಾ ಕಾರ್ಯಕರ್ತೆಯರಿಗೆ 1 ಸಾವಿರ ರೂಪಾಯಿ ಹೆಚ್ಚಿಸಿ ಒಟ್ಟು ಆರು ಸಾವಿರ ಮಾಡಬೇಕಾಗಿತ್ತು. ಆದರೇ ಅದರಲ್ಲಿಯೂ ಸರ್ಕಾರ ಮಾತು ತಪ್ಪಿದೆ. ಕಳೆದ ತಿಂಗಳ ಪ್ರತಿಭಟನೆಯಲ್ಲಿ 10 ಸಾವಿರ ಗೌರವ ನೀಡುವ ಭರವಸೆ ನೀಡಿ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೂಂಡಿಲ್ಲ ಎಂದು ಆರೋಪಿಸಿದರು.