
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರ ಅಭಿನಂದನಾ ಸಮಾರಂಭ ಇದೇ ದಿ 8 ರಂದು ರವಿವಾರ ಬೆಳಿಗ್ಗೆ 10.30 ಕ್ಕೆ ಹಿಂದವಾಡಿಯ ಐಎಂಇಆರ್ ಸಭಾಭವನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 10 ಕ್ಕೆ ಗೋಗಟೆ ಕಾಲೇಜಿನ ಮುಂದಿರುವ ಶ್ರೀ ಕೃಷ್ಣಮಠದಿಂದ ಐಎಂಇಆರ್ ವರೆಗೆ ತೆರೆದ ವಾಹನದಲ್ಲಿ ಶೋಭಾ ಯಾತ್ರೆ ನಡೆಯಲಿದೆ.
ಐಎಂಇಆರ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಷಾ ಶೆಟ್ಟಿ ಮತ್ತು ಶಿವಾನಿ ಜಮಖಂಡಿ ಅವರಿಂದ ಭರತ ನಾಟ್ಯ, ಮಹಿಳಾ ಮಂಡಳದಿಂದ ಹಾಡು ನಡೆಯಲಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ವತಿಯಿಂದ ಅಧ್ಯಕ್ಷರನ್ನು ಸನ್ಮಾನಿಸಲಾಗುತ್ತದೆ. ಹಿರಿಯ ನ್ಯಾಯವಾದಿ ಎಸ್.ಎಂ. ಕುಲಕಣರ್ಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಕೆಬಿಎಂಎಸ್ ನ ಜಿಲ್ಲಾ ಮುಖ್ಯ ಸಂಯೋಜಕ ರಾಮ ಭಂಡಾರಿ, ಉದ್ದಿಮೆದಾರ ಭರತ ದೇಶಪಾಂಡೆ, ಫಡಕೆ, ಆರ್.ಎಸ್. ಮುತಾಲಿಕ ದೇಸಾಯಿ, ವಿಲಾಸ ಜೋಶಿ, ಪ್ರಿಯಾ ಕುಲಕರ್ಣಿ ಮುಂತಾದವರು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಉದ್ದಿಮೆದಾರರು ಮತ್ತು ವಿವಿಧ ಸಂಘಟನೆಗಳ ವತಿಯಿಂದಲೂ ಅಶೋಕ ಹಾರನಹಳ್ಳಿ ಅವರನ್ನು ಸನ್ಮಾನಿಸಲಾಗುತ್ತದೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗೆ ಶ್ರಮಿಸಿ: ಸುಭಾಷ ಆಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ