Latest

ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್ ಆಗಿ ಆಯ್ಕೆಯಾದ ಕನ್ನಡತಿ

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ದೇಶದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಎಂಜಿನಿಯರ್ ಆಗಿ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಆಶ್ರಿತಾ ವಿ.ಒಲೆಟಿ ಆಯ್ಕೆಯಾಗಿದ್ದಾರೆ.

ಆಶ್ರಿತಾ ಬೆಂಗಳೂರಿನ ಏರ್ ಪೋಸ್ಟ್ ಟೆಸ್ಟ್ ಪೈಲೆಟ್ಸ್ ಸ್ಕೂಲ್ ನಲ್ಲಿ ಪದವಿ ಪಡೆದುಕೊಂಡಿದ್ದು, ಫ್ಲೈಟ್ ಟೆಸ್ಟ್ ಕೋರ್ಸ್ ಪೂರೈಸಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಏರೋ ಸ್ಪೇಸ್ ಎಂಜಿನಿಯರ್ ಆಗಿರುವ ಆಶ್ರಿತಾ 2014ರಲ್ಲಿ ಭಾರತೀಯ ವಾಯುಪಡೆಯ ಟೆಕ್ನಿಕಲ್ ವಿಭಾಗಕ್ಕೆ ಆಯ್ಕೆಯಾಗಿದ್ದರು.

ಕೊಳ್ಳೆಗಾಲ ತಾಲೂಕಿನ ವೆಂಕಟೇಶ್ವರ ಜ್ಯುವೆಲರ್ಸ್ ಮಾಲೀಕರಾದ ಒ.ವಿ.ವೆಂಕಟೇಶ್ ಬಾಬು ಹಾಗೂ ಒ.ವಿ.ವಾಣಿ ದಂಪತಿ ಮಗಳು ಆಶ್ರಿತಾ. ಏರ್ ಶೋ ನೋಡಲು ಹೋಗಿದ್ದಾಗ ಫ್ಲೈಟ್ ಟೆಸ್ಟ್ ಎಂಜಿನಿಯರ್ ಆಗಬೇಕು ಎಂದು ಕನಸು ಕಂಡಿದ್ದರಂತೆ. ಅಂತೆಯೇ ಇಂದು ತಮ್ಮ ಕನಸು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯಲ್ಲಿ ಕೊರೊನಾ ಅಟ್ಟಹಾಸ; ಎಎಸ್ಐ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button