Kannada NewsLatestNational

*ಇಂಡೋ-ಲಂಕಾ ಏಷ್ಯಾಕಪ್ ಫೈನಲ್ ಕದನ ಪ್ರಮುಖ ಹೈಲೈಟ್ಸ್*

ಪ್ರಗತಿವಾಹಿನಿ ಸುದ್ದಿ; ಕೊಲಂಬೋ: ಪ್ರತಿಷ್ಠಿತ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಇನ್ನು 20 ದಿನಗಳಷ್ಟೇ ಬಾಕಿ ಉಳಿದಿವೆ. ತವರು ನೆಲದಲ್ಲಿ ನಡೆಯುವ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡ ಏಷ್ಯಾಕಪ್ ಜಯಿಸುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡಿತು.

Home add -Advt

ನಿರೀಕ್ಷೆಯಂತೆಯೇ ಟೀಮ್ ಇಂಡಿಯಾ ಆಟಗಾರರು ಗೆಲುವಿನ ನಗೆ ಬೀರಿದರು. ಅದರಲ್ಲೂ ವೇಗಿ ಮೊಹಮದ್ ಸಿರಾಜ್ ಪಂದ್ಯದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದರು. ಕೇವಲ 16 ಎಸೆತಗಳ ಅಂತರದಲ್ಲಿ 5 ವಿಕೆಟ್ ಕಿತ್ತು ಲಂಕಾ ಪತನದಲ್ಲಿ ಪ್ರಮುಖ ಪಾತ್ರವಹಿಸಿದರು.

ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ಪ್ರಮುಖ ಹೈಲೈಟ್ಸ್ ಇಲ್ಲಿವೆ..

  • ಭಾರತ ತಂಡ 8ನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು. ಈ ಪೈಕಿ 7 ಬಾರಿ (1984, 1988, 1991, 1995, 2010, 2018, 2023) ಏಕದಿನ ಮಾದರಿಯಲ್ಲಿ ಟ್ರೋಫಿ ಗೆದ್ದರೆ, 2016ರಲ್ಲಿ T20 ಮಾದರಿಯಲ್ಲಿ ಟ್ರೋಫಿ ಗೆದ್ದುಗೊಂಡಿತ್ತು.
  • ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳಿಗೆ (129) ಮುಕ್ತಾಯಗೊಂಡ ಪಂದ್ಯ ಇದಾಗಿದೆ. ಇದಕ್ಕೂ ಮೊದಲು 2020ರಲ್ಲಿ ನೇಪಾಳ-ಯುಎಸ್‌ಎ ನಡುವಿನ ಪಂದ್ಯ 104 ಎಸೆತಗಳಲ್ಲಿ ಮುಕ್ತಾಯಗೊಂಡರೆ, 2001 ರಲ್ಲಿ ಶ್ರೀಲಂಕಾ-ಜಿಂಬಾಬ್ವೆ ಪಂದ್ಯ 120 ಎಸೆತಗಳಲ್ಲಿ ಮುಕ್ತಾಯಗೊಂಡಿತ್ತು.
  • ಭಾರತ ತಂಡ 263 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಜಯಿಸಿತು. ಇದು ಏಕದಿನ ಮಾದರಿ ಫೈನಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಎಸೆತಗಳು ಉಳಿದ ಪಂದ್ಯವಾಗಿದೆ. 2003ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ- ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ 226ಎಸೆತಗಳು ಬಾಕಿ ಉಳಿದಿದ್ದವು.
  • ಭಾರತ ತಂಡ ಏಕದಿನ ಮಾದರಿಯಲ್ಲಿ ಅತಿಹೆಚ್ಚು ಬಾಕಿ ಇರುವಂತೆಯೇ ಗೆದ್ದ ಪಂದ್ಯ ಇದಾಗಿದೆ. ಇದಕ್ಕೂ ಮೊದಲು 2001 ರಲ್ಲಿ ಕೀನ್ಯಾ ಎದುರು 231 ಎಸೆತಗಳು ಬಾಕಿ ಇರುವಂತೆ ಪಂದ್ಯ ಜಯಿಸಿತ್ತು.
  • ಭಾರತ ತಂಡ ಏಕದಿನ ಫೈನಲ್ ಪಂದ್ಯಗಳಲ್ಲಿ 2ನೇ ಬಾರಿಗೆ 10 ವಿಕೆಟ್ ಗೆಲುವು ದಾಖಲಿಸಿತು. ಇದಕ್ಕೂ ಮೊದಲು 1998ರಲ್ಲಿ ಶಾರ್ಜಾದಲ್ಲಿ ಜಿಂಬಾಬ್ವೆ ಎದುರು ಈ ಸಾಧನೆ ಮಾಡಿತ್ತು,
  • ಭಾರತ ತಂಡ 5 ವರ್ಷಗಳ ಬಳಿಕ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು. 2018ರಲ್ಲಿ ಕಡೇ ಬಾರಿಗೆ ಟ್ರೋಫಿ ಜಯಿಸಿತ್ತು.

Related Articles

Back to top button