
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಎಸ್ ಐ ಓರ್ವರು ರೌಡಿಗಳಂತೆ ಯುವಕರಿಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ.
ಮಾಗಡಿ ರಸ್ತೆಯ ಪೊಲೀಸ್ ಠಾಣೆಯ ಎಎಸ್ಐ ಶ್ರೀನಿವಾಸ್, ದಯಾನಂದ್ ಹಾಗೂ ಶಶಿಧರ್ ಎಂಬ ಯುವಕ ಮೇಲೆ ಹಲ್ಲೆ ನಡೆಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ವಿರುದ್ಧ ಪ್ರಕರಣ ದಾಖಲಾಗಿದೆ.
ಲಾಂಗ್ ನಿಂದ ಎಎಸ್ಐ ಶ್ರೀನಿವಾಸ್ ಯುವಕರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎ ಎಸ್ ಐ ವಿರುದ್ಧ ವಿಜಯನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಬಾರ್ ಅಂಗಡಿಯಲ್ಲಿ ಎಎಸ್ ಐ ಅಣ್ಣನ ಮಗ ಆನಂದ್ ಹಾಗೂ ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಈ ವೇಳೆ ಆನಂದ್ ಚಿಕ್ಕಪ್ಪನನ್ನು ಕೂಗಿ ಕರೆದಿದ್ದಾನೆ. ತಕ್ಷಣ ಕೈಯಲ್ಲಿ ಲಾಂಗ್, ಲಾಠಿ ಹಿಡಿದು ಬಂದ ಎ ಎಸ್ ಐ, ದಯಾನಂದ್ ಹಾಗೂ ಶಶಿಧರ್ ಎಂಬ ಯುವಕರನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ