Kannada NewsKarnataka NewsLatest

ಜುಲೈ ತಿಂಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದವರೆಷ್ಟು?

ಜುಲೈ ತಿಂಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದವರೆಷ್ಟು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಜುಲೈ ತಿಂಗಳಲ್ಲಿ ಬೆಳಗಾವಿ ನಗರದಲ್ಲಿ ಪೊಲೀಸರು ಟೋವಿಂಗ್ ಆರಂಭಿಸಿದ್ದಾರೆ. ಅಡ್ಡಾದಿಡ್ಡಿಯಾಗಿ ಮತ್ತು ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಎತ್ತಿಕೊಂಡು ಹೋಗುವುದಾಗಿ ಎಚ್ಚರಿಕೆ ನೀಡಿದ್ದರು.

Home add -Advt

ಅದನ್ನು ಜಾರಿಗೂ ತಂದಿದ್ದಾರೆ. ಆದಾಗ್ಯೂ ಜನ ಮಾತ್ರ ಬುದ್ದಿ ಕಲಿತಿಲ್ಲ. ಸಂಚಾರ ನಿಯಮ ಪಾಲಿಸುತ್ತಿಲ್ಲ. ಇಲ್ಲಿದೆ ನೋಡಿ ಪೊಲೀಸರೆ ನೀಡಿರುವ ಮಾಹಿತಿ –

ರಸ್ತೆಗಳಲ್ಲಿ ಅಸ್ತವ್ಯಸ್ಥವಾಗಿ ಹಾಗೂ ಅಸಮರ್ಪಕವಾಗಿ ನಿಷೇಧಿತ/ನಿರ್ಬಂಧಿತ ಸ್ಥಳಗಳಲ್ಲಿ ನಿಲ್ಲಿಸುವ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆಯನ್ನುಂಟು ಮಾಡುತ್ತ ದ್ವಿಚಕ್ರ ಹಾಗೂ ಲಘು ವಾಹನಗಳನ್ನು ನೋ-ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ, ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು ಟೋ ಮಾಡಿ ಒಟ್ಟು 575 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನೂ ಓದಿ – ಎಚ್ಚರ; ಬೆಳಗಾವಿಗೂ ಬಂತು 2 ಟೋಯಿಂಗ್ ವಾಹನ

ಈ ರೀತಿ ತಪ್ಪಿತಸ್ಥರ ವಿರುದ್ಧ ದಾಖಲಿಸಿದ ಪ್ರಕರಣಗಳಲ್ಲಿ ನೋ-ಪಾರ್ಕಿಂಗ್ ಉಲ್ಲಂಘನೆಗಾಗಿ 5,30,900 ರೂ., ಟೋವಿಂಗ್ ಚಾರ್ಜ 4,13,650 ರೂ. ಹೀಗೆ ತಪ್ಪಿತಸ್ಥರಿಂದ ಒಟ್ಟು 9,44,550ರೂ.  ದಂಡವನ್ನು ವಿಧಿಸಲಾಗಿದೆ.
ಬೆಳಗಾವಿ ನಗರದ ರಸ್ತೆಗಳಲ್ಲಿ ಅಸ್ತವ್ಯಸ್ಥ ಹಾಗೂ ಅಸಮರ್ಪಕವಾಗಿ ಮತ್ತು ನಿಷೇಧಿತ/ನಿರ್ಬಂಧಿತ ಸ್ಥಳಗಳಲ್ಲಿ ನಿಲ್ಲಿಸುವ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆಯನ್ನುಂಟು ಮಾಡುವಂತಹ ವಾಹನಗಳ ಕುರಿತು ಇನ್ನು ಮುಂದೆಯೂ ಸಹ ಟೋವ್ ಮಾಡಿ ದಂಡವನ್ನು ವಿಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ –ಟೋಯಿಂಗ್ ಮಾಡೋಕೆ ಪೊಲಿಸರಿಗೂ ಇದೆ ನಿಯಮ; ಏನದು?

ನಗರದಲ್ಲಿ ಅಪಘಾತಗಳನ್ನು ಕಡಿಮೆಗೊಳಿಸಲು ಹಾಗೂ ಸಾರ್ವಜನಿಕರ ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ  ಪೊಲೀಸರು ವಿನಂತಿಸಿದ್ದಾರೆ.

Related Articles

Back to top button