ಪ್ರಗತಿವಾಹಿನಿ ಸುದ್ದಿ; ಒಡಿಶಾ: ಹೊಸ ವರ್ಷಾಚರಣೆ ಸಂಭ್ರಮಕ್ಕಾಗಿ ಭರ್ಜರಿ ಪಾರ್ಟಿ, ಬಾಡೂಟ ಮಾಡಿ ಎಂಜಾಯ್ ಮಾಡಲೆಂದು ಪೊಲೀಸ್ ಅಧಿಕಾರಿಯೊಬ್ಬ ಕುರಿಗಳನ್ನು ಕದ್ದು ಸಿಕ್ಕಿಬಿದ್ದಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೇಲಾ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ ಪೆಕ್ಟರ್ ಸುಮನ್ ಮಲ್ಲಿಕ್ ಕುರಿಗಳನ್ನು ಕದ್ದ ಪೊಲಿಸ್.
ಹೊಸವರ್ಷವನ್ನು ಸ್ನೇಹಿತರೊಂದಿಗೆ ಭರ್ಜರಿಯಾಗಿ ಆಚರಿಸಿ ಬಾಡೂಟ ಮಾಡಲೆಂದು ಎ ಎಸ್ ಐ ಸುಮನ್ ಎರಡು ಕುರಿಗಳನ್ನು ಕದ್ದಿದ್ದಾರೆ. ಈ ವಿಚಾರ ಕುರಿ ಮಾಲೀಕನಿಗೆ ಗೊತ್ತಾಗುತ್ತಿದ್ದಂತೆ ಆತ ಸ್ಬ್ ಇನ್ಸ್ ಪೆಕ್ಟರ್ ಗೆ ಪೊಲೀಸ್ ಅಧಿಕಾರಿಯಾಗಿ ಹೀಗೆ ಮಾಡುವುದು ಸರಿಯಲ್ಲ. ತನ್ನ ಕುರಿಗಳನ್ನು ವಾಪಸ್ ನೀಡಿ ಎಂದು ಕೇಳಿದ್ದಾನೆ.
ಇದಕ್ಕೆ ಒಪ್ಪದ ಪೊಲೀಸ್ ಅಧಿಕಾರಿ, ಕುರಿಗಳನ್ನು ಕಡಿದು ಭರ್ಜರಿ ಬಾಡೂಟ ಮಾಡಿ ತಿಂದು ತೇಗಿದ್ದಾನೆ. ಎ ಎಸ್ ಐ ಈ ನಡೆಗೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಅಲ್ಲದೇ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಬಲಂಗೀರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ಎ ಎಸ್ ಐನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ದೆಹಲಿ ಮಾದರಿ ಜಾರಿಗೆ ತಜ್ಞರ ಸಲಹೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ