Kannada NewsKarnataka News

ದನಕಳ್ಳರ ತಂಡ ಬೇಟೆಯಾಡಿದ ಅಥಣಿ ಪೋಲಿಸ್

ಪ್ರಗತಿವಾಹಿನಿ ಸುದ್ದಿ, ಅಥಣಿ: ತಾಲೂಕಿನ ರೈತರು ಹೈನುಗಾರಿಕೆಗೆ ಸಾಕಿಕೊಂಡಿರುವ ಜಾನುವಾರುಗಳನ್ನು ಕಳ್ಳತನ ಮಾಡುವ ತಂಡವನ್ನು ಅಥಣಿ ಪೋಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದ ತೋಟದ ವಸತಿ ರೈತ ರಾಯಣ್ಣ ಸಿಂಧೂರ ಎಂಬುವರ ಅಂದಾಜು ಎರಡು ಲಕ್ಷದ ಬೆಳೆಬಾಳುವ ಎರಡು ಎಮ್ಮೆಗಳನ್ನು  ೧೫ ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಕಳ್ಳತನ ಮಾಡಲಾಗಿತ್ತು.

ಈ ಕುರಿತು ಗ್ರಾಮಸ್ಥರು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ದೂರಿನ ಆಧಾರದ ಮೇಲೆ ಅಥಣಿ ಪೋಲಿಸರು ಕಾರ್ಯ ಪ್ರವೃತ್ತರಾಗಿ ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಅವರ ನೇತೃತ್ವದಲ್ಲಿ ಪಿಎಸ್‌ಐ ಕುಮಾರ್ ಹಾಡಕರ ತಂಡ ಪ್ರಕರಣ ಭೇದಿಸಿ ಆರು  ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳು ರಾಯಬಾಗ ತಾಲೂಕಿನವರು ಎಂದು ತಿಳಿದು ಬಂದಿದ್ದು ಈ ತಂಡದವರು ಅಥಣಿ, ಕಾಗವಾಡ, ರಾಯಭಾಗ ಸುತ್ತ ಮುತ್ತಲಿನ ನಿರ್ಜನ ಪ್ರದೇಶದಲ್ಲಿ ವಾಸವಾಗಿರುವ ರೈತರ ದನಕರು, ಮೇಕೆ, ಕಳ್ಳತನ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಅಥಣಿ ಡಿವೈಎಸ್ಪಿ ಎಸ್ ವಿ ಗಿರೀಶ್ ಮಾಹಿತಿ ನೀಡಿದರು.

ಒಟ್ಟಾರೆಯಾಗಿ ತಾಲೂಕಿನ ರೈತರ ನಿದ್ದೆಗೆಡೆಸಿದ್ದ ಜಾನುವಾರು ಕಳ್ಳರನ್ನು ಅಥಣಿ ಪೋಲಿಸರು ಬಂಧಿಸಿದ ಬೆನ್ನಲ್ಲೇ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button