Kannada NewsLatestSports

ಏಷ್ಯನ್ ಗೇಮ್ಸ್ ಉದ್ಘಾಟನೆಗೆ ಕ್ಷಣಗಣನೆ

ಪ್ರಗತಿವಾಹಿನಿ ಸುದ್ದಿ, ಹ್ಯಾಂಗ್ ಝೌ: ಏಷ್ಯನ್ ಗೇಮ್ಸ್ 2023ಗೆ ಕ್ಷಣಗಣನೆ ಆರಂಭವಾಗಿದೆ.

ಇಂದು ಚೀನಾದ ಹ್ಯಾಂಗ್‌ ಝೌನ ಒಲಿಂಪಿಕ್ ಕೇಂದ್ರ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 5.30 ಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಏಷ್ಯನ್ ಗೇಮ್ಸ್-2023ಕ್ಕೆ ಚಾಲನೆ ನೀಡಲಿದ್ದಾರೆ.

ಸಿರಿಯಾದ ಅಧ್ಯಕ್ಷ ಅಲ್ ಅಸಾದ್, ಕಾಂಬೋಡಿಯಾದ ರಾಜ ಮತ್ತು ಕುವೈತ್‌’ನ ಕೌಂಟ್ ಪ್ರಿನ್ಸ್, ನೇಪಾಳ ಮತ್ತು ದಕ್ಷಿಣ ಕೊರಿಯಾದ ಪ್ರಧಾನ ಮಂತ್ರಿಗಳು ಸೇರಿದಂತೆ ಜಾಗತಿಕ ಮಟ್ಟದ ಹಲವು ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಈಗಾಗಲೇ ಹ್ಯಾಂಗ್ ಝೌ ಕ್ರೀಡಾಂಗಣ ಕಮಲದ ಆಕಾರದಲ್ಲಿ ಸಕಲ ಸಜ್ಜುಗೊಂಡಿದ್ದು, 80 ಸಾವಿರದಷ್ಟು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ವರ್ಣಾಲಂಕೃತ ದೀಪಗಳಿಂದ ಇಡೀ ಕ್ರೀಡಾಂಗಣ ಕಂಗೊಳಿಸುತ್ತಿದ್ದು ಇದೇ ಮೊದಲ ಬಾರಿ ಪರಿಸರ ಮಾಲಿನ್ಯ ಸೃಷ್ಟಿಸುವ ಸಿಡಿಮದ್ದುಗಳನ್ನು ಕೈಬಿಟ್ಟು ಡಿಜಿಟಲ್ ಪಟಾಕಿಗಳೊಂದಿಗೆ ಉದ್ಘಾಟನೆ ನೆರವೇರಿಸಲು ಚೀನಾ ಸರಕಾರ ನಿರ್ಧರಿಸಿದೆ. ಹೀಗಾಗಿ ಈ ಬಾರಿಯ ಏಷ್ಯನ್ ಗೇಮ್ಸ್ ನ್ನು ಚೀನಾ ‘ಗ್ರೀನ್ ಗೇಮ್ಸ್’ ಎಂದು ಕರೆದಿದೆ.

Home add -Advt

19 ನೇ ಏಷ್ಯನ್ ಗೇಮ್ಸ್‌ ಇದಾಗಿದ್ದು, ಭಾರತದ 655 ಆಟಗಾರರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.

Related Articles

Back to top button