Kannada NewsKarnataka NewsLatest

ಪೊಲೀಸ್ ಅಧಿಕಾರಿಯನ್ನೇ ನಡುರಸ್ತೆಯಲ್ಲಿ ಥಳಿಸಿದ ಭೂಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಟ್ರಾಫಿಕ್ ಎಸಿಪಿ ಆರ್. ಆರ್. ಕಲ್ಯಾಣಶೆಟ್ಟಿ ಅವರಿಗೆ ವ್ಯಕ್ತಿಯೊಬ್ಬ ಜನನಿಬಿಡ ಚನ್ನಮ್ಮ ವೃತ್ತದಲ್ಲೇ ಥಳಿಸಿದ್ದಾನೆ.
ಚನ್ನಮ್ಮ ವೃತ್ತದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಮಹಾರಾಷ್ಟ್ರ ಪಾಸಿಂಗ್ ನ ಬುಲೆರೊ ವಾಹನದಲ್ಲಿ ಆಗಮಿಸಿದ ವ್ಯಕ್ತಿಯೊಬ್ಬನನ್ನು ಎಸಿಪಿ ಕಲ್ಯಾಣಶೆಟ್ಟಿ ನೇತೃತ್ವದ ಸಂಚಾರಿ ಪೊಲೀಸರು ತಪಾಸಣೆ ನಡೆಸುವ ವೇಳೆ ಮತ್ತು ನಂತರ ನಡೆದ ಬೆಳವಣಿಗೆಯಲ್ಲಿ ವಾದ ವಿವಾದ ತಾರಕಕ್ಕೇರಿ ಎಸಿಪಿ ಕಲ್ಯಾಣ ಶೆಟ್ಟಿ ಮೇಲೆ ಎಲ್ಲರೆದುರೇ ಹಲ್ಲೆ ನಡೆಸಿದ್ದಾನೆ.
ನಂತರ ಬಂಧನಕ್ಕೆ ಮುಂದಾದ ಪೊಲೀಸರ ವಾಹನದಲ್ಲಿ ಏರದ  ಹಲ್ಲೆಕೋರ, ದಿಟ್ಟನಂತೆ ವರ್ತಿಸಿ ತನ್ನದೇ ವಾಹನ ಚಲಾಯಿಸಿಕೊಂಡು ಪೊಲೀಸ್ ಠಾಣೆಯತ್ತ ತೆರಳಿದ.
ಹಲ್ಲೆಕೋರನನ್ನು ಕಿರಣ ಬಾಳು ರಾಠೋಡ್( 35) ಎಂದು ಗುರುತಿಸಲಾಗಿದೆ.
ಖಡೇಬಜಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Related Articles

Back to top button