ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉದ್ಯಾಮಬಾಗ್ ಅಭಿಜೀತ ಲಾಡ್ಡಿಂಗ್ & ಬೋರ್ಡಿಂಗ್ ನಲ್ಲಿ ಮ್ಯಾನೇಜರ್ ಮತ್ತು ಮಾಲೀಕರು ಕೂಡಿ ಮಹಿಳೆಯರನ್ನು ಕರೆತಂದು ವೇಶ್ಯಾವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವ ಖಚಿತವಾದ ಮಾಹಿತಿ ಮೇರೆಗೆ, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಸಿಸಿಬಿ ಹಾಗೂ ಪಿಐ ಮಹಿಳಾ ಹಾಗೂ ಮಹಿಳಾ ಠಾಣೆಯ ಸಿಬ್ಬಂದಿ ತಂಡ ಜಂಟಿ ದಾಳಿ ನಡೆಸಿ ಆರೋಪಿ ಹೊಟೇಲ್ ಮಾಲೀಕನನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ.
ಈ ದಾಳಿಯಲ್ಲಿ ಪಾಲ್ಗೊಂಡ ನಂದೀಶ್ವರ ಬಿ ಕುಂಬಾರ, ಪಿಐ ಸಿಸಿಬಿ, ಶ್ರೀ. ಡಿ.ಪಿ. ನಿಂಬಾಳರ ಪಿಐ ಮಹಿಳಾ ಪೊಲೀಸ್ ಠಾಣೆ ಹಾಗೂ ಅವರ ಅಧೀನ ಸಿಬ್ಬಂದಿಯವರ ತಂಡದ ಕಾರ್ಯವನ್ನು ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪೋಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಹಿರೇಬಾಗೇವಾಡಿ ಪೋಲೀಸ್‌ರಿಂದ ಗಾಂಜಾ ದಾಳಿ; ಓರ್ವನ ಬಂಧನ
ದಿನಾಂಕ:23-09-2024 ರಂದು ಹಲಗಾ ಗ್ರಾಮದ ಸರ್ವಿಸ್ ರಸ್ತೆ ಬಳಿ ಭರತೇಶ ಕಾಲೇಜ್ ಎಡಗಡೆ ಬರುವ ಈದ್ದಾ ಕಡೆಗೆ ಸಾಗಿದ ಕಚ್ಚಾ ರಸ್ತೆಯಲ್ಲಿ ಯಾರೋ ಒಬ್ಬನು ಗಾಂಜಾ ತೆಗೆದುಕೊಂಡು ಬರುತ್ತಾನೆ ಎನ್ನುವ ಮಾಹಿತಿ ಬಂದಂತೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಆದೇಶದಂತೆ ಪಿಐ ಹಿರೇಬಾಗೇವಾಡಿ ಠಾಣೆ & ಅವರ ಸಿಬ್ಬಂದಿ ದಾಳಿ ಮಾಡಿ ಆರೋಪಿತನಾದ – ಪಿರಾಜಿ ಯಲ್ಲಪ್ಪ ಯೆಸೂಚೆ (31) ಸಾ॥ ಹಲಗಾ ಗ್ರಾಮ, ತಾ& ಜಿ॥ ಬೆಳಗಾವಿ ಈತನನ್ನು ವಶಕ್ಕೆ ಪಡೆದುಕೊಂಡು ಆತನ ಬಳಿ ಇದ್ದ ಸುಮಾರು ರೂ. 22,000/- ಮೌಲ್ಯದ 509 గాంజా ఎంబ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ದಾಳಿಯಲ್ಲಿ ಪಾಲ್ಗೊಂಡ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಐ ಟಿ ಬಿ ನೀಲಗಾರ, ಹಾಗೂ ಸಿಬ್ಬಂದಿ ಅರುಣ ಕಾಂಬ್ಳೆ, ಬಾಳಪ್ಪ ಗುನ್ನಗೋಳ, ಮಹಾಂತೇಶ ಹೂಗಾರ, ಯಲ್ಲಾಲಿಂಗ ಮಾಳ್ಯಾಗೋಳ, ಯಲ್ಲಪ್ಪ ಮುನವಳ್ಳಿ, ರೇವಣಸಿದ್ದ ತಳೆವಾಡ ರವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ