ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಎಸ್ಸೆಸ್ಸೆಲ್ಸಿ ಎಂಬುದು ಪ್ರತಿಯೊಬ್ಬರ ಶೈಕ್ಷಣಿಕ ಜೀವನದ ಮೊದಲನೆಯ ಮಹತ್ವದ ಹಂತವಾಗಿದ್ದು, ಪ್ರಾಮಾಣಿಕತೆ ಹಾಗೂ ಸತತ ಪ್ರಯತ್ನದಿಂದ ಯಶ ಸಂಪಾದಿಸಿ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಉಚ್ಚಶಿಕ್ಷಣ ಪಡೆಯಬೇಕೆಂದು ಜಿಐಟಿ ಉಪನ್ಯಾಸಕಿ ಪ್ರಿಯಾಂಕಾ ರಜಪೂತ ಹೇಳಿದರು.
ನಗರದ ಬೆಳಗಾವಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ವೃತ್ತಿ ಶಿಕ್ಷಣ ಹಾಗೂ ವೃತ್ತಿ ಜೀವನದ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಷಯ ಸಂಪನ್ಮೂಲ ವ್ಯಕ್ತಿ ಎಂ.ಐ. ಪೂಜಾರ ಮಾತನಾಡಿ, ಎಸ್ಸೆಸ್ಸೆಲ್ಸಿ ನಂತರ ಕೋರ್ಸ್‌ಗಳ ಆಯ್ಕೆ ಸಂದರ್ಭದಲ್ಲಿ ಬೇರೊಬ್ಬರ ಅನುಕರಣೆ ಮಾಡುವುದು ಬೇಡ. ತಮ್ಮ ಆಸಕ್ತಿಯ ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ರಂಜೀತ ಚೌಗುಲೆ ವಿವಿಧ ವೃತ್ತಿ ಕೋರ್ಸಗಳು ಹಾಗೂ ಆ ಕ್ಷೇತ್ರಗಳಲ್ಲಿನ ಉದ್ಯೋಗವಕಾಶಗಳ ಬಗ್ಗೆ ವಿವರಿಸಿದರು.
ಸಂಗೊಳ್ಳಿ ಅಸೋಸಿಯೇಟ್ಸ್‌ನ ಎಂಜಿನಿಯರ್ ಪಾರ್ಥ ಸಂಗೊಳ್ಳಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಸುಧೀರ ಕುಲಕರ್ಣಿ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಎಂ.ಕೆ. ಮಾದಾರ ಪ್ರಾಸ್ತಾವಿಕ ಮಾತನಾಡಿದರು.
ವಿಷಯ ತಜ್ಞ ಶಿಕ್ಷಕರಾದ ಎಂ.ಬಿ. ಅಂಗಡಿ, ಎಂ.ಎನ್. ಮದನಭಾವಿ, ಎಸ್.ಎಸ್. ಕೋಷ್ಠಿ, ಎನ್.ಜೆ. ಕಡಿವಾಳ, ಸಿಆರ್‌ಪಿ ಎಸ್.ಜಿ. ಪಾಟೀಲ, ಸುಭಾಷ ತಾಳುಕರ, ಎಂ.ಆಯ್. ಪೂಜಾರ, ರಂಜಿತ ಚೌಗುಲೆ ಅವರನ್ನು ವಿಜೇಂದ್ರ ಗುಡಿ ಸತ್ಕರಿಸಿದರು.
ವಿದ್ಯಾರ್ಥಿನಿ ಪ್ರತಿನಿಧಿ ಸಾಕ್ಷಿ ಮೊತೆಕರ ಹಾಗೂ ಶ್ರಿದೇವಿ ಇಟಗಿಕರ ಶಾಲೆಯ ಬಗ್ಗೆ ಅನಿಸಿಕೆ ಹಂಚಿಕೊಂಡರು. ಸವಿತಾ ಸೋಲಂಕಿ ಸ್ವಾಗತಿಸಿದರು. ಶೀತಲ ಸುಂಟಕರ ವಂದಿಸಿದರು. ಅಂಕಿತಾ ದೇಶಪಾಂಡೆ ನಿರೂಪಿಸಿದರು.