Latest

ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಅತ್ಯಾಚಾರಕ್ಕೆ ಯತ್ನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸೆ.10ರಂದು ರಾತ್ರಿ 9;30ಕ್ಕೆ ವಿಲಿಯಮ್ ಪ್ರಕಾಶ ಎಂಬಾತ ತನಗೆ ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾಗಿ ಇದೀಗ ಮಹಿಳೆ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

ಶಾಂತಲಾನಗರದಲ್ಲಿ ಈ ಘಟನೆ ನಡೆದಿದ್ದು, ಅಂದು ಏರಿಯಾದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಸರ್ಜನೆಗೆಂದು ಜನರು ತೆರಳಿದ್ದರು. ಈ ವೇಳೆ ಆರ್ಚ್ ಲೈಟ್ ಸ್ವಿಚ್ ಆಫ್ ಮಾಡಲು ತೆರಳಿದ್ದ ವೇಳೆ ಮಹಿಳೆಯ ಹಿಂದಿನಿಂದ ಬಂದ ವಿಲಿಯಮ್ ಪ್ರಕಾಶ್ ಎಂಬಾತ ಚಾಕು ತೋರಿಸಿ ಅತ್ಯಾಚರಕ್ಕೆ ಯತ್ನಿಸಿದ್ದಾನೆ. ವಿಲಿಯಮ್ ಪ್ರಕಾಶ್ ನನ್ನು ತಳ್ಳಿ ಓಡಿಬಂದು ಮಹಿಳೆ ತಪ್ಪಿಸಿಕೊಂಡಿದ್ದಾಳೆ. ಜೀವಬೆದರಿಕೆ ಹಾಕಿದ್ದರಿಂದ ಇಷ್ಟು ದಿನ ಸುಮ್ಮನಿದ್ದ ಮಹಿಳೆ ಇದೀಗ ದೂರು ನೀಡಿದ್ದಾರೆ.

ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಅಶೋಕನಗರ ಪೊಲೀಸ್ ಠಾಣೆಗೆ ಬಂದು ಮಹಿಳೆ ದೂರು ದಾಖಲಿಸಿದ್ದಾರೆ.

ಸಫಾಯಿ ಕರ್ಮಚಾರಿಗಳಿಗೆ ಗುಡ್ ನ್ಯೂಸ್

https://pragati.taskdun.com/latest/safai-karmachariselectric-scootercm-basavaraj-bommai/

Related Articles

Back to top button